Breaking News

ಭಾರತ ರಷ್ಯಾ ಶೃಂಗಸಭೆ: 8 ಐತಿಹಾಸಿಕ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ.

india-russia-sign-five-russian-s-400-triumf-missile-shield-systems-deal

ನವದೆಹಲಿ (5) : ಭಾರತ ಹಾಗು ರಷ್ಯಾ ನಡುವಣ 19 ದ್ವಿಪಕ್ಷೀಯ ಸಮಾವೇಶ ಇಂದು ರಾಜಧಾನಿಯ ಹೈದರಾಬಾದ್ ಹೌಸ್ ನಲ್ಲಿ  ಆರಂಭವಾಯಿತು. ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ  ವ್ಲಾಡಿಮಿರ್  ಪುಟಿನ್ ಮತ್ತು  ಭಾರತದ ಪ್ರಧಾನ ಮಂತ್ರಿ ನರೆಂದ್ರ ಮೋದಿಯವರು ಐತಿಹಾಸಿಕ  8  ಒಪ್ಪಂದಗಳಿಗೆ ಸಹಿ ಹಾಕಿದರು. 

ಮಹತ್ವದ ಎಸ್-400 ಟ್ರುಯುಂಪ್ ರಕ್ಷಣಾ ವ್ಯವಸ್ಥೆ ಕರಿದಿಯ ರೂ 40 ಸಾವಿರ ಕೋಟಿಯ ಮೌಲ್ಯದ  ಒಪ್ಪಂದಕ್ಕೆ  ಸಹಿ ಹಾಕಲಾಗಿದೆ ಎಂದು ತಿಳಿದುಬಂದಿದೆ. ಈ ಮೊದಲು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಾಂಪ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರೆ ದಿಗ್ಬಂದನ ಹಾಕುವ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ ಇಂದು ಅಮೇರಿಕಾದ ಒತ್ತಡವನ್ನು ದಿಕ್ಕರಿಸಿ ಈ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅಲ್ಲದೇ ದಿಗ್ಬಂದನದಿಂದ  ವಿಶೇಷ ವಿನಾಯಿತಿಯನ್ನು ಪಡೆಯುವ ವಿಶ್ವಾಸದಲ್ಲಿ ಮೋದಿ ಸರಕಾರ ಸಹ ಇದೆ ಎನ್ನಲಾಗುತ್ತಿದೆ.

ಬಾಹ್ಯಾಕಾಶ ಸಹಕಾರ ಒಪ್ಪಂದದಲ್ಲಿ ರಷ್ಯಾದ ಸೈಬಿರಿಯಾ ಬಳಿಯಿರುವ ನೋವೊಸಿಬಿರಿಸ್ಕಿ  ನಗರದ ಸಮೀಪದಲ್ಲಿ ಭಾರತದ ಬಾಹ್ಯಾಕಾಶ ನಿರ್ವಹಣಾ ಕೇಂದ್ರದ ಸ್ಥಾಪನೆಗೆ ಅವಕಾಶ ನೀಡುವ ಒಪ್ಪಂದಕ್ಕೆ ಪುಟಿನ್ ಒಪ್ಪಿ ಸಹಿಮಾಡಿದ್ದಾರೆ ಎನ್ನಲಾಗುತ್ತಿದ್ದು, ಇನ್ನು ಮುಂದೆ ಬಾಹ್ಯಾಕಾಶ ಕ್ಷೆತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಇದು ಸಹಕಾರಿಯಾಗಲಿದೆ.

ರಷ್ಯಾದಿಂದ ಯುದ್ದ ಸಾಮಗ್ರಿಗಳನ್ನು ಕರೀದಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಚೀನಾ ಗಡಿ ಪ್ರದೇಶದಲ್ಲಿ ಹೆಚ್ಚಿನ ಭದ್ರತೆಯ ಸಂಭಂದ ಅಗತ್ಯವಿರುವ ಎಲ್ಲ ರಕ್ಷಣಾ ವ್ಯವಸ್ಥೆಯನ್ನು ಕರೀದಿಸಲಾಗುತ್ತದೆ . ಅಲ್ಲದೇ ಇಲ್ಲಿಯೇ ಬಂಡವಾಳ ಹೂಡಿಕೆ ಮಾಡಿ ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಮಾಡುವ ಬರವಸೆಯು ದೊರೆತಿದೆ.

india-russia-sign-five-russian-s-400-triumf-missile-shield-systems-deal


ಮತ್ತೊಂದು ಮಹತ್ವದ ಒಪ್ಪಂದದ ಪ್ರಕಾರ ಪರಮಾಣು ಚಾಲಿತ ಅತ್ಯಾಧುನಿಕ ಜಲಾಂತರ್ಗಾಮಿ ನೌಕೆಯ ಕರೀದಿಗೆ ಸಂಭಂಧಪಟ್ಟ ದಾಖಲೆಗಳಿಗು ಸಹ ಪರಸ್ಪರ ಸಹಿ ಹಾಕಲಾಗಿದೆ. ಈ ನೌಕೆಯ ಕರೀದಿಯಿಂದ ನಮ್ಮ ಐಎನೆಸ್  ಚಕ್ರಾ ಜಾಗಕ್ಕೆ ಬದಲಿ ವ್ಯವಸ್ಥೆ ಆಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಇದಲ್ಲದೇ 2022 ಕ್ಕೆ ಚಂದ್ರನ ಮೇಲೆ ಕಾಲಿಡಲು ತಯಾರಿ ನಡೆಸುತ್ತಿರುವ ಭಾರತಕ್ಕೆ, ಅದರ ಗಗನಯಾತ್ರಿಗಳಿಗೆ ತರಬೇತಿಯನ್ನು ನೀಡುವ ಸಂಭಂದ ಒಪ್ಪಂದವನ್ನು ಮಾಡಿಕೊಳ್ಳಲಾಯಿತು ಎಂದು ತಿಳಿದು ಬಂದಿದೆ.

ರಷ್ಯಾ ಅಧ್ಯಕ್ಷರೊಂದಿಗೆ ಉನ್ನತ ಮಟ್ಟದ ನಿಯೋಗವು ಭಾರತಕ್ಕೆ ಬೇಟಿ ನೀಡಿದ್ದು, ಇದರಿಂದ ಭಾರತ ಮತ್ತು ರಷ್ಯಾ ನಡುವಿನ ಸಂಭಂಧ ಇನ್ನಷ್ಟು ಹೆಚ್ಚಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
SPONSORED CONTENTNo comments