Breaking News

ವಿರಾಟ್ ಕೊಹ್ಲಿ ಮತ್ತು ಮೀರಾ ಬಾಯಿ ಚಾನು ಅವರಿಗೆ "ಖೇಲ್ ರತ್ನ" ಪ್ರಶಸ್ತಿ

virat-kohli-mirabai-chanu-to-receive-khel-ratna-on-september-25-sports-ministry
ಖೇಲ್ ರತ್ನ ಪ್ರಶಸ್ತಿ ಲಭಿಸಿರುವ ಮೀರಾ ಬಾಯಿ ಚಾನು ಮತ್ತು ವಿರಾಟ್ ಕೊಹ್ಲಿ 

ನವದೆಹಲಿ: ಭಾರತೀಯ ಕ್ರಿಕೇಟ್  ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು  ವಿಶ್ವ ಚಾಂಪಿಯನ್ ವೇಟ್ ಲಿಪ್ಟರ್  ಮೀರಾಬಾಯಿ ಚಾನು ಅವರಿಗೆ "ಖೇಲ್ ರತ್ನ " ಪ್ರಶಸ್ತಿ  ಲಭಿಸಿದೆ. 

ಈ ಬಾರಿಯ "ಖೇಲ್ ರತ್ನ " ಪ್ರಶಸ್ತಿ  ಪ್ರಧಾನ ಸಮಾರಂಭ ಸೆಪ್ಟೆಂಬರ್ 25 ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. ಅಲ್ಲಿ  ವಿರಾಟ್ ಕೊಹ್ಲಿ ಮತ್ತು  ಮೀರಾಬಾಯಿ ಚಾನು ಅವರಿಗೆ ರಾಷ್ಟ್ರಪತಿ ರಾಮನಾಥ ಕೊವಿಂದ್ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. 

ಇನ್ನು ಸ್ಟಾರ್ ಜಾವಲಿನ್  ಆಟಗಾರ ನೀರಜ್ ಚೋಪ್ರಾ ಸೇರಿ ಇನ್ನೂ 20 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ , ಎಂಟು ಕ್ರೀಡಾಪಟುಗಳಿಗೆ ದ್ರೋಣಾಚಾರ್ಯ ಮತ್ತು ನಾಲ್ಕು  ಕ್ರೀಡಾಪಟುಗಳಿಗೆ ಧ್ಯಾನ್ ಚಂದ್ ಪ್ರಶಸ್ತಿ ಲಭಿಸಿದೆ. 

 "ಖೇಲ್ ರತ್ನ " ಪ್ರಶಸ್ತಿಯು  7.5 ಲಕ್ಷ ರೂಪಾಯಿಗಳು, ಪದಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಅಲ್ಲದೇ ದ್ರೋಣಾಚಾರ್ಯ  ಮತ್ತು  ಧ್ಯಾನ್ ಚಂದ್ ಪುರಸ್ಕಾರಗಳು ತಲಾ ಐದು ಲಕ್ಷ ರೂಪಾಯಿಗಳು ಮತ್ತು ಸ್ಮರಣಿಕೆಯನ್ನು ಹೊಂದಿವೆ. 
SPONSORED CONTENTNo comments