Breaking News

ಡಿ. ಕೆ. ಶಿವಕುಮಾರ್ ವಿರುದ್ಧ ಎಫ್ ಐ ಆರ್ ದಾಖಲು : ಮತ್ತೆ ಎದುರಾದ ಸಂಕಷ್ಟ

ed-files-money-laundering-case-against-karnataka-congress-leader-d-k-shivakumar
ಡಿ. ಕೆ. ಶಿವಕುಮಾರ್  ವಿರುದ್ಧ  ಎಫ್ ಐ ಆರ್  ದಾಖಲು : ಮತ್ತೆ ಎದುರಾದ ಸಂಕಷ್ಟ   
ಬೆಂಗಳೂರು : ರಾಜ್ಯ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ ಅವರ ವಿರುದ್ಧ  ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಎಫ್.ಐ. ಆರ್. ದಾಖಲಿಸಿದೆ. ಈ ಮೂಲಕ ಡಿಕೆಶಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಬಂಧನ ಭೀತಿ ಎದುರಾಗಿದೆ. 

ಡಿ. ಕೆ. ಶಿವಕುಮಾರ ಅವರ ಮೇನೆಗಳ ಮೇಲೆ ಐಟಿ ದಾಳಿ ನಡೆಸಿದ ಸಮಯದಲ್ಲಿ ದೆಹಲಿಯ ನಿವಾಸದಲ್ಲಿ 8.5 ಕೊಟಿಗಳಷ್ಟು  ದಾಖಲೆ ರಹಿತ ಹಣ ದೊರೆತಿತ್ತು ಅಲ್ಲದೆ ದಾಳಿಯ ಸಂದರ್ಭದಲ್ಲಿ ದೊರೆತ ದಾಖಲೆಗಳ ಮೂಲಕ ಹವಾಲಾದ ಮೂಲಕ ಹಣದ ವ್ಯವಹಾರ ನಡೆಸಿದ ಕುರಿತು ವಿವರಗಳನ್ನು ಆದಾಯ ತೆರಿಗೆ ಇಲಾಖೆ ನೀಡಿತ್ತು. 

Blaupunkt LED TVs

ಅಕ್ರಮ ಹಣವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಜಾರಿ ನಿರ್ದೇಶನಾಲಯವು  ಎಫ್.ಐ. ಆರ್. ದಾಖಲಿಸಿರುವುದರಿಂದ  ಡಿ. ಕೆ. ಶಿವಕುಮಾರ ಅವರಿಗೆ ಬಂಧನದ ಭೀತಿ ಎದುರಾಗಿದ್ದೆ. 
SPONSORED CONTENTNo comments