Breaking News

ಏಷ್ಯನ್ ಗೇಮ್ಸ್: ಅತ್ಯುತ್ತಮ ಸಾಧನೆಗೈದ ಅಥ್ಲಿಟ್ ಗಳಿಗೆ ಪ್ರಧಾನಿಯ ಅಭಿನಂದನೆ.

asian-games-pm-modi-congratulates-indian-contingent-for-best-ever-performance.

ಏಷ್ಯನ್ ಗೇಮ್ಸ್ 2018 ರಲ್ಲಿ ಅತೀ ಹೆಚ್ಚಿನ ಪದಕಗಳನ್ನು ಗೆಲ್ಲುವ ಮೂಲಕ ಆಭೂತಪೂರ್ವ ಸಾಧನೆಯನ್ನು ಮಾಡಿರುವ ಭಾರತದ ಅಥ್ಲಿಟ್ ಗಳಿಗೆ  ಪ್ರಧಾನಿ ಮೋದಿಯವರು ಶುಭಾಶಯಗಳನ್ನು ತಿಳಿಸಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚಿನ ಪದಕಗಳನ್ನು ಗೆಲ್ಲುವ ಮೂಲಕ ಭಾರತ ಕ್ರೀಡೆಯಲ್ಲಿ ಸದೃಡವಾಗಿದೆ. ಈ ಭಾರಿ 15 ಚಿನ್ನ, 24 ಬೆಳ್ಳಿ ಮತ್ತು 30 ಕಂಚಿನ ಪದಕಗಳು ಸೇರಿ ಒಟ್ಟು 69 ಮೆಡಲ್ ಗಳನ್ನು ಗೆಲ್ಲುವ ಮೂಲಕ ಕ್ರೀಡಾಕೂಟವನ್ನು ಸ್ಮರಣೀಯವಾಗಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಅವರು ಪೋಷಕರು, ತರಬೇತುದಾರರು, ಸಹಾಯಕ ತರಬೇತುದಾರರು, ಕ್ರೀಡಾಪಟುಗಳ ಸ್ನೇಹಿತರಿಗೆ ಅವರು ಸಾಧನೆ ಮಾಡಲು ಕೊಡುಗೆ ನೀಡಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು.

ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಇಂಡೋನೇಷ್ಯಾದ ಪ್ರಧಾನಿ ಜೋಕೋ ವಿಡೋಡೋ ಅವರಿಗೂ ಹಾಗೂ ಕ್ರೀಡಾ ಚೈತನ್ಯವನ್ನು ಮೆರೆದ ಇಂಡೋನೇಷ್ಯಾದಜನತೆಗೂ ಅಭಿನಂದನೆ ಎಂದು ಟ್ವೀಟ್ ಮಾಡಿದ್ದಾರೆ.
SPONSORED CONTENTNo comments