Breaking News

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ವಾಪಸ್..!

Siddaramaiah_returns_from_abroad
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿದೇಶ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಇಂದು ಬೆಂಗಳೂರಿಗೆ ವಾಪಾಸಾಗಿದ್ದಾರೆ. ತಮ್ಮ 12 ದಿನಗಳ ಪ್ರವಾಸದಿಂದ  ರಿಪ್ರೆಶ್  ಆಗಿರುವ ಅವರು ಬಿನ್ನಮತ ಶಮನಗೊಳಿಸುವ  ನಿರೀಕ್ಷೆಯಿದೆ. 
Ganesh Chaturthi Deals

ಸಿದ್ದರಾಮಯ್ಯ ಅವರು ಪ್ರವಾಸಕ್ಕೆ ತೆರಳಿದ ಸಂಧರ್ಭದಿಂದ  ಬೆಳಗಾವಿಯ ಸಹೋದರರು ಮತ್ತು ಲಕ್ಷ್ಮಿ ಹೆಬ್ಬಾಳಕರ್ ಅವರ ನಡುವಿನ ಗುದ್ದಾಟ ಸಮ್ಮಿಶ್ರ ಸರಕಾರದ ಪತನದ ಅಂಚಿಗೆ ತಂದು ನಿಲ್ಲಿಸಿದೆ. ಈ ಸಂದರ್ಭದಲ್ಲಿ ಅವರ ನಡುವಿನ ಬಿನ್ನಮತ ಶಮನಗೊಳಿಸಲು ಸಿದ್ದರಾಮಯ್ಯ  ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. 

ಅಲ್ಲದೇ ಸಿದ್ದರಾಮಯ್ಯ, ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕ ಸತೀಶ್ ಜಾರಕಿಹೊಳಿ ನಡುವಿನ ಇಂದಿನ ಸಭೆಯು ಮಹತ್ವವನ್ನು ಪಡೆದಿದ್ದು, ರಾಜಕೀಯ ವಲಯದಲ್ಲಿ ಯಾವರೀತಿಯ ಸಂಚಲನ ಉಂಟು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. 

SPONSORED CONTENTNo comments