Breaking News

ಪಾಕ್ ವಿರುದ್ಧ ಗೆಲ್ಲುವ ಭರವಸೆಯಲ್ಲಿ ಭಾರತ .

India-is-hoping-to-win-against-Pakistan
ಪಾಕ್ ವಿರುದ್ಧ ಗೆಲ್ಲುವ ಭರವಸೆಯಲ್ಲಿ ಭಾರತ.
ದುಬೈ: ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಇಂದು ದುಬೈನಲ್ಲಿ ಸುಪರ್ 4 ಸುತ್ತಿನ ಮೂರನೆಯ ಪಂದ್ಯ ನಡೆಯಲಿದೆ.

ನಾಲ್ಕು ದಿನಗಳ ಹಿಂದೆಯಸ್ತೆ ನಡೆದಿದ್ದೆ ಭಾರತ- ಪಾಕ್ ಪಂದ್ಯದ ನೆನಪು ಮಾಸುವ ಮುನ್ನವೇ ಮತ್ತೆ ಈ ಎರಡೂ ತಂಡಗಳು ಮುಖಾಮುಖಿಯಾಗುವ ಸಮಯ ಬಂದಿದೆ. ಈಗಾಗಲೇ ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡ ಬಲಿಸ್ಟವಾಗಿದ್ದು, ಇಂದಿನ ಪಂದ್ಯವನ್ನೂ ಗೆಲ್ಲುವ ಭರವಸೆಯಲ್ಲಿದ್ದಾರೆ.

ಭಾರತ ತನ್ನ  ಸುಪರ್ 4 ಸುತ್ತಿನ ಮೂರೂ ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದ್ದು, ಮೊದಲು ಹಾಂಕಾಂಗ್ ತಂಡದ ವಿರುದ್ಧ ಜಯ ಗಳಿಸಿದ್ದರು. ಮೊನ್ನೆ ನಡೆದ ಪಾಕಿಸ್ತಾನದ ವಿರುದ್ಧ ಎರಡನೆಯ ಗೆಲುವು ಭಾರತದ ಪಾಲಾಗಿದೆ. ಅಲ್ಲದೇ ಬಾಂಗ್ಲಾ ವಿರುದ್ಧವೂ ೮ ವಿಕೆಟ್ಗಳ ಜಯವನ್ನು ಕಂಡಿದೆ. ಇಂದಿನ ಪಂದ್ಯವೂ ಮುಖ್ಯವಾಗಿದ್ದು, ಗೆಲ್ಲುವ ನಿರೀಕ್ಷೆಯನ್ನು ಮೂಡಿಸಿದೆ. ಇಂದು ಪಾಕ್ ತಂಡದ ವಿರುದ್ಧ ಸೋತರೆ ಅಪಘಾನಿಸ್ತಾನ್ ವಿರುದ್ಧ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಲಿದೆ.

ಭಾರತೀಯ ತಂಡದ ಬೌಲಿಂಗ್ ಪಡೆಯು ಅತ್ಯುತ್ತಮ ದಾಳಿಯನ್ನು ನಡೆಸುತ್ತಿದೆ. ಹಾರ್ದಿಕ್ ಪಾಂಡ್ಯ ಅವರು ಗಾಯಗೊಂಡು ಪಂದ್ಯದಿಂದ ಹೊರಗುಳಿದಿದ್ದರೂ ಅವರ ಸ್ಥಾನಕ್ಕೆ ಜಡೇಜಾ ಬಂದಿದ್ದಾರೆ. ಜೆಸ್ಟ್ರೀಟ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ ಉತ್ತಮ ಲಯವನ್ನು ಕಂಡುಕೊಂಡಿದ್ದಾರೆ.

ಇನ್ನು ಬ್ಯಾಟಿಂಗ್ ವಿಭಾಗಕ್ಕೆ ಬಂದರೆ ಶಿಖರ್ ಧವನ್, ನಾಯಕ ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ದೋನಿ ಮತ್ತು ಅಂಬಾಟಿ ರಾಯದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೇ ಮನೀಷ್ ಪಾಂಡೆ, ಕೆ.ಎಲ್.ರಾಹುಲ್ ಅವರು ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ.

ಒಟ್ಟಿನಲ್ಲಿ ಭಾರತದ ಪಾಲಿಗೆ ಇಂದಿನ ಪಂದ್ಯವನ್ನು ಗೆಲ್ಲುವುದು ಅವಶ್ಯವಾಗಿದ್ದು, ಒಂದು ಉತ್ತಮ ಕಾದಾಟಕ್ಕಾಗಿ ಎರಡೂ ದೇಶದ ಜನತೆ ಕಾದು ಕುಳಿತಿದ್ದಾರೆ. ಯಾವಾಗಲೂ ಭಾರತ-ಪಾಕ್ ಕ್ರಿಕೆಟ್ ಪಂದ್ಯವೆಂದರೆ ಅಲ್ಲಿ ಹೆಚ್ಚಿನ ಕಾತರ, ತಾವೇ ಗೆಲ್ಲಬೇಕೆಂಬ ಹಠ ಇದ್ದದ್ದೇ... 
SPONSORED CONTENTNo comments