Breaking News

ಏಷ್ಯನ್ ಗೇಮ್ಸ್: ಪುರುಷರ 49 ಕೆ.ಜಿ.ವಿಭಾಗದ ಬಾಕ್ಸಿಗ್ ನಲ್ಲಿ ಚಿನ್ನ ಗೆದ್ದ ಅಮಿತ್ ಪಂಘಾಲ್ .

Asian-Games-amit-panghal-who-won-gold-in-the-men-49kg-category-boxing.
ಏಷ್ಯನ್ ಗೇಮ್ಸ್ ನಲ್ಲಿ  ಹಸನ್ಬಾಯ್ ಡಸ್ಮಮಾವ್ ಅವರ ವಿರುದ್ಧ ಗೆದ್ದು ಚಿನ್ನದ ಪದಕ ಗಳಿಸಿದ  ಅಮಿತ್ ಪಂಘಾಲ್ 

ಜಕಾರ್ತಾ: ಇಂಡೋನೇಷ್ಯಾದಲ್ಲಿ  ನಡೆಯುತ್ತಿರುವ  ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪುರುಷರ 49 ಕೆ.ಜಿ. ಬಾಕ್ಸಿಗ್ ನಲ್ಲಿ  ವಿಭಾಗದಲ್ಲಿ  ಭಾರತದ ಅಮಿತ್ ಪಂಘಾಲ್  ಅವರು ಗೆಲ್ಲುವ ಮೂಲಕ ಭಾರತಕ್ಕೆ ಈ ವರ್ಷದ ಬಾಕ್ಸಿಗ್ ವಿಭಾಗದ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. 

ಉಜ್ಬೇಕಿಸ್ತಾನ್ ದ  ಒಲಂಪಿಕ್ ಚಾಂಪಿಯನ್  ಹಸನ್ಬಾಯ್ ಅವರನ್ನು ಮಣಿಸಿ ಭಾರತಕ್ಕೆ ಚಿನ್ನದ ಪದಕವನ್ನು ತಂದಿದ್ದಾರೆ. ಪ್ರಾರಂಭದ ಹಂತದಲ್ಲಿ  ಎದುರಾಳಿಯ ವಿರುದ್ಧ  ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ಅನುಭವಿಸಿದರಾದರು  ಎರಡನೇ ಸುತ್ತಿನಲ್ಲಿ  ಎದುರಾಳಿಯ ವಿರುದ್ಧ  ಪ್ರಾಭಲ್ಯ ಮೆರೆದರು. ಈ ಮೂಲಕ ಭಾರತಕ್ಕೆ ಹದಿನಾಲ್ಕನೇ ಚಿನ್ನವನ್ನು ಗಳಿಸಿಕೊಟ್ಟಿದ್ದಾರೆ. 


 SPONSORED CONTENT


No comments