Breaking News

ಏಷ್ಯನ್ ಗೇಮ್ಸ್ ಗೆ ವರ್ಣ ರಂಜಿತ ತೆರೆ : ಭಾರತ ತಂಡಕ್ಕೆ ರಾಣಿ ಮುಂದಾಳತ್ವ.

Asian-Games-Closing-ceremony-Rani-leads-India-to-team.

ಜಕಾರ್ತಾ : ಸುಮಾರು ಹದಿನೈದು ದಿನಗಳಿಂದ ನಮ್ಮನ್ನು ತನ್ನೆಡೆಗೆ ಆಕರ್ಷಿಸಿದ್ದ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಇಂದು ಸಂಜೆ ಅದ್ದೂರಿಯ ತೆರೆ ಕಂಡಿತು.

2018 ರ ಏಷ್ಯನ್ ಗೇಮ್ಸ್ ವರ್ಣ ರಂಜಿತ ಮುಕ್ತಾಯಕ್ಕೆ ಜಕಾರ್ತಾದ ಗೆಲೋರಾ ಬಂಗ್ ಕರ್ನೋ ಸ್ಟೇಡಿಯಂ ಸಾಕ್ಷಿಯಾಯಿತು. ಮುಕ್ತಾಯ ಸಮಾರಂಭದಲ್ಲಿ ಭಾರತ ತಂಡದ ಮುಂದಾಳತ್ವವನ್ನು ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ದ್ವಜ ಹಿಡಿದು ಮುನ್ನಡೆಸಿಕೊಟ್ಟರು. 

ಮುಕ್ತಾಯ ಸಮಾರಂಭದ ಆರಂಭದಲ್ಲಿ ಅನೇಕ ಸಾಂಸ್ಕ್ರತಿಕ ಕಾರ್ಯಕ್ರಮಗಳು ವಿಕ್ಷಕರನ್ನು ರಂಜಿಸಿದವು. ಭಾರತದ ಸಿದ್ದಾರ್ಥ ಸ್ಲೇಥಿಯಾ ಮತ್ತು ತಂಡದವರು ಹಿಂದಿ ಹಾಡುಗಳ ಮೂಲಕ ಗಮನ ಸೆಳೆದರು. 

ಏಷ್ಯನ್ ಗೇಮ್ಸ್ 2018 ರಲ್ಲಿ ಭಾರತದ ಕ್ರೀಡಾ ಪಟುಗಳ ಸಾಧನೆ ಅದ್ಭುತವಾಗಿತ್ತು. ಈ ಬಾರಿ 15 ಚಿನ್ನ, 24 ಬೆಳ್ಳಿ ಮತ್ತು 30 ಕಂಚಿನ ಪದಕಗಳೊಂದಿಗೆ ಏಷ್ಯನ್ ಗೇಮ್ಸ್ ನಲ್ಲಿ ಅತೀ ಹೆಚ್ಚು ಪದಕ ಪಡೆದು ಸಾಧನೆ ಮಾಡಿತು. 

ಮುಂದಿನ ಕ್ರೀಡಾ ಕೂಟಕ್ಕೆ  ಬರುವಂತೆ ಚೀನಾದ ಜಾಕ್ ಮಾ ಕಂಪನಿಯ ಸಂಸ್ಥಾಪಕ ಅಲಿಬಾಬಾ ಮತ್ತು  ಒಲಂಪಿಕ್ ಚಾಂಪಿಯನ್ ಈಜುಪಟು ಸೂನ್ ಯಾಂಗ್ ಅವರು ಆಹ್ವಾನ ನೀಡಿದರು. 
 SPONSORED CONTENT


No comments