Breaking News

ಏಷ್ಯಾ ಕಪ್ ಫೈನಲ್ 2018: ಭಾರತಕ್ಕೆ 223 ರನ್ನುಗಳ ಗುರಿಯನ್ನು ನೀಡಿದ ಬಾಂಗ್ಲಾ..!

Asia-Cup-final-2018-Bangladesh-aim-to-score-223-against-India

ದುಬೈ: ಏಷ್ಯಾಕಪ್ 2018 ರ ಕೊನೆಯ ಪಂದ್ಯವಾಗಿ ಇಂದು ಬಾಂಗ್ಲಾದೇಶ ಮತ್ತು ಭಾರತ ಹೋರಾಟವನ್ನು ನಡೆಸುತ್ತಿವೆ. ಟಾಸ್ ಸೋತು ಬ್ಯಾಟಿಂಗ್ ಪ್ರಾರಂಭಿಸಿದ ಬಾಂಗ್ಲಾದೇಶ ಭಾರತಕ್ಕೆ 223 ರನ್ನುಗಳ ಗುರಿಯನ್ನು ನೀಡಿದೆ.

ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಭಾರತೀಯರು,  ಬಾಂಗ್ಲಾ ಆಟಗಾರರನ್ನು ಅತೀ ಕಡಿಮೆ  ಮೊತ್ತಕ್ಕೆ ಕಟ್ಟಿಹಾಕಬೇಕೆಂದು   ಪ್ರಯತ್ನ ಪಟ್ಟರು. ಆದರೆ ಉತ್ತಮ ಆರಂಭವನ್ನು ಕಂಡ ಬಾಂಗ್ಲಾ ದಿಢೀರ್ ಕುಸಿತಕ್ಕೆ ಒಳಗಾಯಿತು. ಆರಭಿಕರಾಗಿ ಬ್ಯಾಟಿಂಗ್ ಗೆ ಇಳಿದ ಮೆಹದಿ ಹಸ್ಸನ್(32) ಮತ್ತು ಲಿಟೋನ್ ದಾಸ್ (121) ಉತ್ತಮ ಆರಂಭವನ್ನೇ ನೀಡಿದರು.  ಇನ್ನುಳಿದಂತೆ ಸೌಮ್ಯ ಸರ್ಕಾರ್ (33೩), ಮಶ್ರಫೆ ಮೊರ್ಟಜ್ (7), ಮಹಮ್ಮದ್ ನಜ್ಮುಲ್ (7)ಮುಶಫೀರ್ ರಹೀಮ್ (5), ಮಹಮ್ಮದುಲ್ಲಾ (4) ಹೇಳಿಕೊಳ್ಳುವ ಸಾಧನೆಯನ್ನು ಮಾಡಲಿಲ್ಲ.

ಭಾರತದ ಪರ ಕುಲದೀಪ್ ಯಾಧವ್ 3, ಕೇದಾರ್ ಜಾಧವ್ 2, ಯಜುವೇಂದ್ರ ಕೆಹಾಳ್ ಮತ್ತು ಜೆಸ್ಟ್ರೀಟ್ ಬುಮ್ರಾ ತಲಾ 1 ವಿಕೆಟ್ ಪಡೆದರು. 


SPONSORED CONTENTNo comments