Breaking News

ಏಷ್ಯಾಕಪ್ : ಸೂಪರ್ 4 ನಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ ಏಳು ವಿಕೇಟಗಳ ಗೆಲುವು

Asia-Cup-India-beat-Bangladesh-by-seven-wickets-in-Super-4

ದುಬೈ: ನಿನ್ನೆ ನಡೆದ ಏಷ್ಯಾ ಕಪ್ ನ ಸೂಪರ್ ೪ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಏಳು ವಿಕೆಟ್ ಗಳ ಭರ್ಜರಿ ಗೆಲುವನ್ನು ಭಾರತದ ಕ್ರಿಕೆಟ್ ತಂಡ ಧಾಖಲಿಸಿದೆ. 

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಬಾಂಗ್ಲಾ ತಂಡ 174 ರನ್ನುಗಳ ಸುಲಭ ಗುರಿಯನ್ನು ಭಾರತಕ್ಕೆ ನೀಡಿತು. ಈ ಗುರಿಯನ್ನು ಬೆನ್ನತ್ತಿದ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್  ಮತ್ತು  ರೋಹಿತ್ ಶರ್ಮಾ ಉತ್ತಮ ಆಟವನ್ನೇ ಆಡಿದರು.  ಶಿಖರ್ ಧವನ್ 1 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ 40 ರನ್ನುಗಳನ್ನು ಸೇರಿಸಿದರು.  ರೋಹಿತ್ ಶರ್ಮಾ 5 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ ಅಜೇಯ 83 ರನ್ನುಗಳನ್ನು ಗಳಿಸಿದರು. 
.
ಅಂಬಟಿ ರಾಯದು 13 ರನ್ನುಗಳನ್ನು ಸೇರಿಸಿದರೆ. ಮಾಜಿ ನಾಯಕ ಮಹೇಂದ್ರ ಸಿಂಗ್ ದೋನಿ ಅವರು 33 ರನ್ನುಗಳನ್ನು ಸೇರಿಸಿದರು. ಭಾರತದ ಬ್ಯಾಟಿಂಗ್ ವೇಗಕ್ಕೆ ಬಾಂಗ್ಲಾ ಬೌಲಿಂಗ್ ಪೂರ್ಣ ತತ್ತರಿಸಿಹೋಯಿತು. 

ಬಾಂಗ್ಲಾದೇಶದ ಪರವಾಗಿ ಶಾಕಿಬ್ ಅಲ್ ಹಾಸನ್, ರುಬೈಲ್ ಹೊಸೈನ್ ಮತ್ತು ಮುಶ್ರಫೆ ಮೊರ್ತಜಾ ತಲಾ ಒಂದೊಂದು ವಿಕೆಟ್ ಪಡೆದು ತಮ್ಮ ತಂಡಕ್ಕೆ ಬೆಂಬಲಿಗರಾದರು. 
SPONSORED CONTENTNo comments