Breaking News

ಏಷ್ಯನ್ ಗೇಮ್ಸ್ : ಮಹಿಳಾ ಹಾಕಿಯಲ್ಲಿ ಚಿನ್ನದ ಕನಸು..

ndian-womens-hockey-final-preview.

ಜಕಾರ್ತಾ: ಭಾರತದ ಹಾಕಿ ತಂಡವು ಏಷ್ಯನ್ ಕ್ರೀಡಾಕೂಟದಲ್ಲಿ ಮೂವತ್ತಾರು ವರ್ಷಗಳ ನಂತರ ಚಿನ್ನದ ಪದಕವನ್ನು ಗೆಲ್ಲುವ ಕನಸಿನಲ್ಲಿದ್ದಾರೆ. 

ಬುಧವಾರ ನಡೆದ ಸೆಮಿಪೈನಲ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡವು ೧-೦ ಗೋಲಿನಿಂದ ಚೀನಾ ತಂಡವನ್ನು ಮಣಿಸಿದೆ. ಇದರೊಂದಿಗೆ ೨೦ ವರ್ಷಗಳ ನಂತರ ಸೆಮಿ ಪೈನಲ್ ತಲುಪಿದ ಸಾಧನೆಯನ್ನು  ಮಾಡಿದೆ. 1982 ರಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ   ಭಾರತ ಚಿನ್ನದ ಪದಕವನ್ನು ಗೆದ್ದಿತ್ತು. 

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿರುವ ರಾಣಿ ರಾಂಪಾಲ್ ಬಳಗ, ಕ್ರಮಾಂಕದಲ್ಲಿ ೧೪ ನೇ  ಸ್ಥಾನದಲ್ಲಿರುವ ಜಪಾನಿನ  ತಂಡವನ್ನು ಸುಲಭವಾಗಿ ಮಣಿಸುವ ಆಲೋಚನೆಯನ್ನು ಹೊಂದಿದೆ. 

ಭಾರತದ ವನಿತೆಯರು ರಕ್ಷಣಾ ವಿಭಾಗದಲ್ಲಿ ಭಲಿಷ್ಟರಾಗಿದ್ದು, ಈ ಭಾರಿ ಎದುರಾಳಿಗೆ ಕೇವಲ ಒಂದು ಗೋಲು ಬಿಟ್ಟಿರುವುದು ಇದಕ್ಕೆ ಸಾಕ್ಷಿಯಾಗಿದೆ. 

ಮುಂಚೂಣಿ ವಿಭಾಗದಲ್ಲಿ ಆಡುವ ವಂದನಾ ಕಟಾರಿಯಾ ಮತ್ತು ರಾಣಿಯವರು ಜಪಾನಿನ ವಿರುದ್ದವೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

 SPONSORED CONTENT


No comments