Breaking News

ಮೂರನೆ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ 203 ರನ್ನುಗಳ ಬ್ರಹತ್ ಗೆಲುವು

ಇಂಗ್ಲೆಂಡ್ ವಿರುದ್ದ ಜಯಗಳಿಸಿದ ಭಾರತ ತಂಡ 

 ಇಂಗ್ಲೆಂಡ್ ವಿರುದ್ದ ಇಲ್ಲಿನ ಟ್ರೆಂಟ್ ಬ್ರಿಡ್ಜ್  ಕ್ರೀಡಾಂಗಣದಲ್ಲಿ ನಡೆದ ಮೂರನೆ ಟೆಸ್ಟ್ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತದ ಗೆಲುವನ್ನು ಸಾಧಿಸಿದೆ.

ಈ ಮೂಲಕ ಸರಣಿಯಲ್ಲಿ ಮೊದಲೆರಡು ಸೋಲನುಭವಿಸಿದ್ದ ಭಾರತ ತಂಡ ಈ ಗೆಲುವಿನ ಮೂಲಕ ಸರಣಿಯನ್ನು ತನ್ನದಾಗಿಸಿಕೊಳ್ಳುವ ಅವಕಾಶವನ್ನು ಉಳಿಸಿಕೊಂಡಿದೆ. ಇದು ಪಂದ್ಯಗಳ ಸರಣಿಯಲ್ಲಿ 1-2 ಅಂತರವನ್ನು ಸಾಧಿಸುವ ಮೂಲಕ ಉಳಿದೆರಡು ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಒಳಗಾಗಿದೆ.

ಅಂತಿಮ ಇನ್ನಿಂಗ್ಸ್ ನಲ್ಲಿ 521 ರನ್ನುಗಳ ಬೃಹತ್ ಮೊತ್ತವನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡ ನಾಲ್ಕನೇ ದಿನದಾಟದಲ್ಲಿ 9 ವಿಕೆಟ್ ನಷ್ಟದೊಂದಿಗೆ 311 ರನ್ನುಗಳನ್ನು ಗಳಿಸಲು ಸಾಧ್ಯವಾಯಿತು. ಬಳಿಕ ಕೊನೆಯ ದಿನದಾಟದಲ್ಲಿ 104.5 ಓವರ್ ಗಳಲ್ಲಿ 317 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು. ಇದರೊಂದಿಗೆ ಜೋಸ್ ಬಟ್ಲರ್ 106 ಮತ್ತು ಬೆನ್ ಸ್ಟೋಕ್ಸ್ ರವರ 62 ರನ್ನುಗಳ ಹೋರಾಟ ವ್ಯರ್ಥವಾಯಿತು.

ಭಾರತದ ಪರ ಜಸ್ಟ್ರೀತ್ ಬೂಮ್ರಾ ಐದು ವಿಕೆಟ್ ಗಳನ್ನು ಕಿತ್ತು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಈ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ (97) ಮತ್ತು ಅಜಿಂಕ್ಯ ರಹಾನೆರ (81) ಸಮಯೋಜಿತ ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್ ನಲ್ಲಿ 329 ರನ್ ಗಳಿಸಿತು.

ಇದಕ್ಕುತ್ತರವಾಗಿ ಮಾರಕ ದಾಳಿ ನಡೆಸಿದ ಹಾರ್ಧಿಕ್ ಪಾಂಡ್ಯ 28 ಕ್ಕೆ 5 ವಿಕೆಟ್ ಗಳಿಸಿ ಇಂಗ್ಲಂಡ್ ತಂಡವನ್ನು 161ರನ್ನುಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

ದ್ವಿತೀಯ ಇನ್ನಿಂಗ್ಸ್ ನಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ(103), ಚೆತೇಶ್ವರ ಪುಜಾರ(72), ಹಾರ್ದಿಕ್ ಪಾಂಡ್ಯ ಅರ್ಧ ಶತಕದ(52) ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 352 ರನ್ನುಗಳನ್ನು ಸೇರಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ಇಂಗ್ಲೆಂಡ್ ತಂಡದ ಗೆಲುವಿಗೆ 521 ರನ್ನುಗಳ ಬೃಹತ್ ಮೊತ್ತವನ್ನು ನೀಡಿತು.


 SPONSORED CONTENT



No comments