ಹುಷಾರ್..! ನೀವು ಕುಡಿಯುವ ಪ್ಲಾಸ್ಟಿಕ್ ಬಾಟಲ್ ನೀರಿನಿಂದಾಗುವ ಅಪಾಯ ಏನೆಂದು ಗೊತ್ತೇ..? - News Desk

Friday, August 3, 2018

ಹುಷಾರ್..! ನೀವು ಕುಡಿಯುವ ಪ್ಲಾಸ್ಟಿಕ್ ಬಾಟಲ್ ನೀರಿನಿಂದಾಗುವ ಅಪಾಯ ಏನೆಂದು ಗೊತ್ತೇ..?


ಇಂದಿನ ದಿನದಲ್ಲಿ ನಾವು ಅತೀ ಹೆಚ್ಚಾಗಿ ಪ್ಲಾಸ್ಟಿಕ್ ಗಳ ಬಳಕೆಯನ್ನು ಮಾಡುತ್ತಿದ್ದೇವೆ. ಅಂತೆಯೇ ನಮ್ಮ ನೀರಿನ ಬಾಟಲಿಗಳು ಸಹ ಪ್ಲಾಸ್ಟಿಕ್ ಮಯವಾಗಿದೆ. ಇಂದು ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರು ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಬಳಸುತ್ತಿದೇವೆ. ಇಂದು ನಾವು ನೀರಿನ ಬಾಟಲಿಗಳನ್ನು ಕೊಳ್ಳುವಾಗ  ಅವುಗಳ ಬಣ್ಣ , ಆಕಾರ, ಸೌಂದರ್ಯಗಳನ್ನು ನೋಡುತ್ತೇವೆಯೇ ಹೊರತು ಅವುಗಳ ಗುಣಮಟ್ಟ ಅಥವಾ ಕ್ವಾಲಿಟಿ ಯನ್ನು ನೋಡಿ ಕೊಳ್ಳುವುದಿಲ್ಲ. ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಬಳಸುವುದರಿಂದ ಉಂಟಾಗುವ ಅನಾರೋಗ್ಯಕರ ಅಂಶಗಳನ್ನು ನಾವು ಇಂದು ತಿಳಿದುಕೊಳ್ಳೋಣ. ಈ ಚಿಕ್ಕ ಪ್ರಯತ್ನ ನಮ್ಮ ನ್ಯೂಸ್ ಡೆಸ್ಕ್ ನ ಕಡೆಯಿಂದ...

ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನು ಕುಡಿಯುವುದರಿಂದ ಉಂಟಾಗುವ ಪರಿಣಾಮಗಳು..

ಹಾನಿಕಾರಕ ರಾಸಾಯನಿಕಗಳು  :
ಕಳಪೆ ಗುಣಮಟ್ಟದ ಪ್ಲಾಸ್ಟಿಕ ಬಾಟಲಿಗಳಲ್ಲಿ ನೀರನ್ನು ಸಂಗ್ರಹಿಸಿದಾಗ ಅವುಗಳಲ್ಲಿ ಪ್ಲೋರೈಡ, ಆರ್ಸೆನಿಕ್ ಮತ್ತು ಅಲ್ಯುಮಿನಿಯಂ ನಂತಹ ರಾಸಾಯನಿಕ ವಸ್ತುಗಳು ಉತ್ಪಾದನೆಯಾಗುತ್ತದೆ. ಇವುಗಳಿಂದ ಮಾನವನ ದೇಹಕ್ಕೆ ತುಂಬಾ ಅಪಾಯಗಳು ಉಂಟಾಗುತ್ತವೆ. ಇಂತಹ ನೀರಿನ ಸೇವನೆ ನಿದಾನವಾದ ವಿಷದ ಸೇವನೆಯನ್ತೆಯೇ. ನಿದಾನವಾಗಿ ನಿಮ್ಮ ಆರೋಗ್ಯವನ್ನು ಕೆಡಿಸುವಲ್ಲಿ ಮಹತ್ವದ ಪಾತ್ರವನ್ನು ಉಂಟು ಮಾಡುತ್ತದೆ.

ಡಯಾಕ್ಸಿನ್ ಎಂಬ ರಾಸಾಯನಿಕದ ಉತ್ಪಾದನೆ :
ಬಾಟಲಿಗಳಲ್ಲಿ ನೀರನ್ನು ತುಂಬಿ, ಕೊಂಡೊಯ್ಯುವಾಗ ನೇರವಾದ ಸೂರ್ಯನ ಕಿರಣಗಳು ಬಿಳುವಂತೆ ಇಡುತ್ತೇವೆ. ಕೆಲವೊಮ್ಮೆ ಕಾರಿನಲ್ಲಿ ಮುಂದೆ ಅಥವಾ ಹೆಚ್ಚಿನ ಉಷ್ಟ್ಣತೆಯಲ್ಲಿ ವಾಹನದ ಜೊತೆಯಲ್ಲಿ ಬಿಟ್ಟು ತೆರಳುತ್ತಿರಿ. ಇಂತಹ ಸಂದರ್ಭದಲ್ಲಿ ಈ ಪ್ಲಾಸ್ಟಿಕ್ ಬಾಟಲ್ ಗಳು ಬಿಸಿಯಾಗಿ ಡಯಾಕ್ಸಿನ್ ಎಂಬ ಮಹಾನ್ ವಿಷವನ್ನು ಉಂಟುಮಾಡುತ್ತದೆ. ಇದರ ಸೇವನೆಯು ಮಹಾ ಮಾರಿ ಕ್ಯಾನ್ಸರ್ ಗೆ  ಪ್ರಚೋದನೆಯನ್ನು ನೀಡಿದಂತೆ ಆಗುತ್ತದೆ.


ಬಯೋಪಿನೈಲ್ ಎ ಎಂಬ ರಾಸಾಯನಿಕದ ಉತ್ಪಾದನೆ :
ಬಯೋಪಿನೈಲ್ ಎ ಎಂಬ ರಾಸಾಯನಿಕವು  ಮಾನವನ ದೇಹಕ್ಕೆ ತುಂಬಾ ಅಪಾಯಕಾರಿಯಾಗಿದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ಸಂಗ್ರಹಿಸುವುದು ಮತ್ತು ಸೇವಿಸುವುದು ತುಂಬಾ ಅಪಾಯಕಾರಿಯಾಗಿದೆ. ಈ ರಾಸಾಯನಿಕವುಳ್ಳ ನೀರನ್ನು ಸೇವಿಸುವುದರಿಂದ ಮದುಮೇಹ, ಬೊಜ್ಜು, ಫಲವಂತಿಕೆಯ ಸಮಸ್ಯೆ ಮತ್ತು ಬಾಲಕೀಯರ ಆರಂಭಿಕ ಪ್ರೌಡಾವಸ್ಥೆಯ ಸಮಸ್ಯೆ ಗಳಿಗೆ  ಕಾರಣವಾಗಬಹುದು.

ಲಿವರ್ ಕ್ಯಾನ್ಸರ್ ಮತ್ತು ಕಡಿಮೆ ವೀರ್ಯಾಣು ಸಂಖ್ಯೆ :
ಪ್ಲಾಸ್ಟಿಕ್ ಬಾಟಲಿಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದರಿಂದ ಅದರಲ್ಲಿರುವ  ಥಾಲೆಟ್ಸ್ ಎಂಬ ರಾಸಾಯನಿಕದಿಂದಾಗಿ
ಲಿವರ್ ತುಂಬಾ ಅಪಾಯಕ್ಕೊಳಗಾಗುತ್ತದೆ. ಅಲ್ಲದೇ ಲಿವರ್ ಕ್ಯಾನ್ಸರ್ ನಂತಹ ಅಪಾಯವು ತಪ್ಪಿದ್ದಲ್ಲ. ಇವಸ್ಟೆ ಅಲ್ಲದೇ ವೀರ್ಯಾಣುಗಳ  ಸಂಖ್ಯೆಯು  ಕಡಿಮೆಯಾಗಿವ ಅಪಾಯವು ಕಂಡುಬಂದಿದೆ.

ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ :
ನಾವು ಪ್ಲಾಸ್ಟಿಕ್ ಬಾಟಲಿಯಲ್ಲಿರುವ ನೀರನ್ನು ಸೇವಿಸಿದಾಗ ಅದರಲ್ಲಿರುವ ಅಪಾಯಕಾರಿ ರಸಾಯನಿಕಗಳಿಂದಾಗಿ ದೇಹದ ಪ್ರತಿ ರಕ್ಷಣಾ ವ್ಯವಸ್ಥೆಯು ಹಾನಿಗೊಳಗಾಗುತ್ತದೆ. ಇದರಿಂದಾಗಿ ನಮ್ಮಲ್ಲಿರುವ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಅನೇಕ ರೋಗಗಳು ಅಂಟಿಕೊಳ್ಳುವ ಅಪಾಯವು ನಮ್ಮನ್ನು ಕಾಡುತ್ತದೆ.


ಪ್ಲಾಸ್ಟಿಕ್ ಬಾಟಲಿಯಲ್ಲಿ  ಸಂಗ್ರಹಿಸಿದ  ಮತ್ತು ಅವುಗಳಲ್ಲೇ ಕಾದು ಬಿಸಿಯಾಗಿರುವ ನೀರಿನಿಂದ ಅಪಾಯಗಳು ಕಂಡಿತಾ ಇದೆ. ಬಾಟಲಿಗಳಲ್ಲಿ ನೀರನ್ನು ಕೊಂಡೊಯ್ಯುವ ಸಂದರ್ಭದಲ್ಲಿ ಮೇಲೆ ಹೇಳಿದಂತಹ  ಅವಕಾಶಗಳನ್ನು ತಪ್ಪಿಸುವುದು ಒಂದು ಒಂದು ಉತ್ತಮ ಮಾರ್ಗವಾಗಿದೆ. ಬಾಟಲಿಗಳಲ್ಲಿ ಕೊಂಡೊಯ್ಯುವ ಸಮಯದಲ್ಲಿ ಒಳ್ಳೆಯ ಗುಣಮಟ್ಟದ ಬಾಟಲಿಗಳನ್ನು ಕೊಳ್ಳುವುದು ಸೂಕ್ತ. ಅಲ್ಲದೇ ಇಂದು ತಾಮ್ರದ ಬಾಟಲಿಗಳು ಲಬ್ಯವಿದ್ದು, ಅವುಗಳು ನಮ್ಮ ಆರೋಗ್ಯವನ್ನು ಸಹ ಹೆಚ್ಚಿಸುತ್ತವೆ.
( ಇವನ್ನೂ ಓದಿರಿ : ಪ್ಲೇಟ್ಲೆಟ್ ಕೌಂಟ್ ಅನ್ನು ನೈಸರ್ಗಿಕವಾಗಿ ಹೆಚ್ಚಿಸುವ ಆಹಾರಗಳು ಯಾವುವು ..?  )

ವಿಷ ತುಂಬಿದ ಇಂದಿನ ಜೀವನದಲ್ಲಿ ಉತ್ತಮ ಆರೋಗ್ಯವನ್ನು ಕಂಡುಕೊಳ್ಳಲು ಸಹಕರಿಸುವ ನಮ್ಮ ಸಣ್ಣ ಪ್ರಯತ್ನಕ್ಕೆ ನಿಮ್ಮ ಸಹಕಾರವಿದ್ದರೆ ಧಯವಿಟ್ಟು ನಮ್ಮ ಲೇಖನಗಳನ್ನು ಓದಿ ಮತ್ತು ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡುವ ಮೂಲಖ ನಮ್ಮನ್ನು ಪ್ರೋತ್ಸಾಹಿಸಿ...

ಶೇರ್ ಮಾಡಲು ಕೆಳಗೆ ಕಾಣುತ್ತಿರುವ ಸಾಮಾಜಿಕ ಜಾಲ ತಾಣಗಳ ಚಿನ್ಹೆಗಳ ಮೇಲೆ ಕ್ಲಿಕ್ ಮಾಡಿ.. ಶೇರ್ ಮಾಡಿ ....



YOU MAY ALSO LIKE

No comments:

Post a Comment