Breaking News

ಏಷ್ಯನ್ ಗೇಮ್ಸ್: ಜಿನ್ಸನ್ ಜಾನ್ಸನ್ ಗೆ 1500 ಮೀ. ಓಟದಲ್ಲಿ ಚಿನ್ನ.

asian-games-jinson-johnson-get-gold-in-1500-mr-running
ಏಷ್ಯನ್  ಗೇಮ್ಸ್ ನ 1500 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಜಿನ್ಸನ್ ಜಾನ್ಸನ್ 

ಜಕಾರ್ತಾ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ  ಭಾರತದ ಅಥ್ಲಿಟ್ ಜಿನ್ಸನ್  ಜಾನ್ಸನ್ ಅವರು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಇದು ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಸಿಕ್ಕ ಹೆನ್ನೆರಡನೆ ಚಿನ್ನದ ಪದಕವಾಗಿದೆ. ಅಥ್ಲಿಟ್ ಜಿನ್ಸನ್  ಜಾನ್ಸನ್ 1500 ಮೀ. ಓಟದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದು, ದೇಶದೆಲ್ಲೆಡೆ ಮೆಚ್ಚಿಗೆ ವ್ಯಕ್ತವಾಗುತ್ತಿದೆ. ಇದು ಏಷ್ಯನ್ ಗೇಮ್ಸ್ ನಲ್ಲಿ ಅವರ ಎರಡನೇ ಪಾದಕವಾಗಿದೆ. 

ಈ ಮೊದಲು ಪುರುಷರ 800 ಮೀ ಓಟದಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಸಾಧನೆಯನ್ನು ಮಾಡಿದ್ದರು. ಇದೆ ವಿಭಾಗದಲ್ಲಿ ಭಾಗವಹಿಸಿದ್ದ ಭಾರತದ ಮಂಜೀತ್ ಸಿಂಗ್ ನಾಲ್ಕನೇ ಸ್ಥಾನವನ್ನು ಪಡೆಯುವ ಮೂಲಕ ಪದಕ ಹೀನರಾದರು. 
 SPONSORED CONTENT


No comments