Breaking News

ಏಷ್ಯನ್ ಗೇಮ್ಸ್ : ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಅರ್ಪಿಂದರ್ ಸಿಂಗ್ ..!

asian-games-arpinder-singh-win-gold-for-india
ಏಷ್ಯನ್ ಗೇಮ್ಸ್ ನಲ್ಲಿ ಟ್ರಿಪಲ್ ಜಂಪ್ ವಿಭಾಗದಲ್ಲಿ ಚಿನ್ನ ಗೆದ್ದ ಅಪಿಂದರ್ ಸಿಂಗ್ 

ಜಕಾರ್ತಾ: ಏಷ್ಯನ್ ಗೇಮ್ಸ್  ಕ್ರೀಡಾಕೂಟದಲ್ಲಿ  ಪುರುಷರ ಟ್ರಿಪಲ್ ಜಂಪ್ ನಲ್ಲಿ ಭಾರತದ ಅರ್ಪಿಂದರ್ ಸಿಂಗ್ ಚಿನ್ನದ ಪದಕವನ್ನು ಗೆದ್ದಿದ್ದಾರೆ.  

ಏಷ್ಯನ್ ಗೇಮ್ಸ್ ನಲ್ಲಿ  ಟ್ರಿಪಲ್ ಜಂಪ್ ವಿಭಾಗದಲ್ಲಿ ಚಿನ್ನವನ್ನು ಗೆದ್ದು ಮಹತ್ತರ ಸಾಧನೆಯನ್ನು ಅರ್ಪಿಂದರ್ ಸಿಂಗ್ ನಿರ್ಮಿಸಿದ್ದಾರೆ.  ಮೂಲಕ ಭಾರತಕ್ಕೆ ಬರೋಬ್ಬರಿ 48 ವರ್ಷಗಳ ಬಳಿಕ ಸ್ವರ್ಣ ಪದಕ ದೊರೆತಂತಾಗಿದೆ. ಅಥ್ಲಿಟ್ ಅರ್ಪಿಂದರ್ ಸಿಂಗ್ 16.77 ಮೀ. ದೂರಕ್ಕೆ ಜಿಗಿಯುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ. 

 SPONSORED CONTENT


No comments