Breaking News

ಮಳೆಗಾಲದಲ್ಲಿ ಚರ್ಮ ಮತ್ತು ಕೂದಲಿನ ರಕ್ಷಣೆ

Take-Care-of-Your-Skin-hair-during-monsoon
ಮಳೆಗಾಲದಲ್ಲಿ ನಿಮ್ಮ ಚರ್ಮ ಮತ್ತು ಕೂದಲನ್ನು ರಕ್ಷಿಸಿಕೊಳ್ಳಿ 

ಮಳೆಗಾಲವೆಂದರೆ ಏನೋ ಸಂತೋಷ, ಜಿಟಿ ಜಿಟಿ ಮಳೆಯಲ್ಲಿ ನೆನೆಯುವ ಕುಷಿ, ಎಲ್ಲೆಲ್ಲೂ ಹಸಿರು  ಸಮೃದ್ದಿಯ ಕಾಲ. ಆದರೆ ಆರೋಗ್ಯದ ವಿಷಯಕ್ಕೆ ಬಂದರೆ ಅನೇಕ ತೊಂದರೆಗಳು ಉಂಟಾಗುತ್ತವೆ. ಈ ಮಳೆಗಾಲದಲ್ಲಿ ಚರ್ಮದ ಮತ್ತು  ಕೂದಲಿನ  ಆರೈಕೆಯ ಕುರಿತು ಕೆಲವು ಸಲಹೆಗಳೊಂದಿಗೆ ನಿಮ್ಮೊಂದಿಗೆ ಬಂದಿರುವೆ. ಆ ಸಲಹೆಗಳು ಏನೆಂದು ತಿಳಿಯಲು ಮುಂದೆ ಓದಿ .. 

ಚರ್ಮ ಮತ್ತು ಕೂದಲಿನ ರಕ್ಷಣೆಯ ಕುರಿತು ಕೆಲವು ಸಲಹೆಗಳು :

ಚರ್ಮದ ರಕ್ಷಣೆ :- 
ಮಳೆಗಾಲದಲ್ಲಿ ಚರ್ಮದ ಆರೋಗ್ಯಕಾಗಿ ಹೆಚ್ಚಿನ ಲಕ್ಷ್ಯವನ್ನು ಇಡಲೇ ಬೇಕಾಗುತ್ತವೆ. ಮಳೆಗಾಲದಲ್ಲಿ ದೂಳು ಇಲ್ಲದಿದ್ದರೂ ಚರ್ಮವು ಮಲಿನವಾಗುತ್ತದೆ. ಈ ಮಲಿನತೆಯನ್ನು ಹೋಗಲಾಡಿಸಲು ಎಸ್ ಪಿ ಎಪ್ ಆಧಾರಿತ ಉತ್ಪನ್ನಗಳನ್ನು ಬಳಸುವುದು ಅವಶ್ಯಕವಾಗಿದೆ. ಇದರಿಂದ ಚರ್ಮವು ಹೊಳಪಿನಿಂದ ಕೂಡಿರುತ್ತದೆ. ಹೈಡ್ರೇಟಿಂಗ್ ಫೇಸ್ ಜಲ್ ಗಳು ಚರ್ಮದ ತುರಿಕೆ ಮತ್ತು ಸುಟ್ಟ ಚರ್ಮವನ್ನು  ಸರಿಪಡಿಸಲು  ಸಹಾಯವನ್ನು ಮಾಡುತ್ತವೆ. ಮಳೆಗಾಲದಲ್ಲಿ ಚರ್ಮವು ಒಣಗುವ ತೊಂದರೆಯನ್ನು ಅನುಭವಿಸುತ್ತಿದ್ದರೆ  ಅಲೋವೆರಾ ಜೆಲ್ ನ್ನು ಬಳಸುವುದು ಉತ್ತಮವಾಗಿದೆ. ಅಲೋವೆರಾ ಜಲ್ ಚರ್ಮದ ನೋವು ಮತ್ತು ಚರ್ಮದ ಒಡೆಯುವಿಕೆಯನ್ನು ತಡೆಗಟ್ಟುತ್ತದೆ. 

ಕೂದಲಿನ ರಕ್ಷಣೆ :-
ಮಳೆಗಾಲದಲ್ಲಿ ಕೂದಲು ಬೇಗನೆ ಒದ್ದೆಯಾಗಿ ಸಿಕ್ಕು ಕಟ್ಟುವುದು ಮತ್ತು ಉದುರುವುದು ಹೆಚ್ಚು. ಇಂತಹ ಸಂದರ್ಭದಲ್ಲಿ ಕೂದಲಿನ ಬುಡ ಗಟ್ಟಿಯಾಗಿ ಬಲಿತು ಕೂದಲು ಚೆನ್ನಾಗಿ ಬೆಳೆಯಲು, ತಲೆ ಹೊಟ್ಟು ನಿವಾರಣೆಯಾಗಳು ನೈಸರ್ಗಿಕ ಎಣ್ಣೆಯನ್ನು ಕೂದಲಿಗೆ ಹಚ್ಚುವುದು ಉತ್ತಮ. ಶುಷ್ಕತೆಯನ್ನು ತಡೆದು ಕೂದಲಿನ  ದುರಸ್ತಿ ಮಾಡಲು ಇದು ಸಹಾಯಕ.  ನೈಸರ್ಗಿಕ, ಮಳೆಗಾಲಕ್ಕೆ ಸರಿ ಹೊಂದುವ ಎಣ್ಣೆಯನ್ನು ಬಳಸುವುದರಿಂದ ಕೂದಲು ಈ ಮಳೆಗಾಲದಲ್ಲಿ ಸೊಂಪಾಗಿರುತ್ತದೆ.

ಮಳೆಗಾಲದ  ವಾತಾವರಣದಲ್ಲಿ ತೇವಾಂಶ ಅಧಿಕವಾಗಿರುವುದರಿಂದ ಚರ್ಮವು ತೈಲ ಯುಕ್ತ ಮತ್ತು ಸತ್ತ ಕೋಶಗಳಿಂದ  ತುಂಬಿರುತ್ತದೆ. ಫೇಸ್ ಸ್ಕ್ರಬ್ ಮಾಡುವ ಮೂಲಕ ಅವುಗಳ ನಿವಾರಣೆಯನ್ನು ಮಾಡಿಕೊಳ್ಳಬಹುದು. ಉತ್ತಮ ನೈಸರ್ಗಿಕ ಎಣ್ಣೆಯನ್ನು ಬಳಸಿ ಕೂದಲನ್ನು ಈ ಮಳೆಗಾಲದಲ್ಲಿ ಕಾಪಾಡಿಕೊಳ್ಳಬಹುದು. ಈ ಸಲಹೆಗಳನ್ನು ಪಾಲಿಸಿ, ಉತ್ತಮವೆನಿಸಿದರೆ ಶೇರ್ ಮಾಡಿ, ನಮ್ಮನ್ನು ಪ್ರೋತ್ಸಾಹಿಸಿ.. 



SPONSORED CONTENT

No comments