Breaking News

ಮುದ್ರಾ ಯೋಜನೆ ಬಗ್ಗೆ ನಿಮಗೆಸ್ಟು ಗೊತ್ತು..?


ಮುದ್ರಾ ಯೋಜನೆ ಎಂದರೇನು?

ಸಣ್ಣ ಪುಟ್ಟ ವ್ಯವಹಾರವನ್ನು ಪ್ರಾರಂಭಿಸುವ ಬಯಕೆ ಇರುವವರಿಗೆ ಸರಕಾರದವತಿಯಿಂದ ಕಡಿಮೆ ಬಡ್ಡಿದರದಲ್ಲಿ 10 ಲಕ್ಷದ ವರೆಗೆ ಸಾಲವನ್ನು ನೀಡುವ ಒಂದು ಕೇಂದ್ರ ಸರಕಾರದ ಯೋಜನೆಯನ್ನು ಮುದ್ರಾ (MUDRA-Micro Units Development and Refinance Agency) ಯೋಜನೆ ಎನ್ನುತ್ತಾರೆ.

Pradhan_mantri_Mudra_Yojana

ಇಂದಿನ ದಿನದಲ್ಲಿ ಸಾಕಷ್ಟು ಜನ ವಿದ್ಯಾರ್ಹತೆಯನ್ನು ಹೊಂದಿದ್ದೂ, ಕೆಲಸ ಸಿಗದೇ ಕಷ್ಟದಲ್ಲಿರುವವರು ಸಣ್ಣ ವ್ಯವಹಾರವನ್ನು ಪ್ರಾರಂಭಿಸಬೇಕು ಎಂದುಕೊಳ್ಳುತ್ತಾರೆ. ಆದರೆ ಬಂಡವಾಳದ ಕೊರತೆಯಿಂದಾಗಿ ಕೈ ಹಾಕಲು ಹೆದರುತ್ತಿರುತ್ತಾರೆ. ಅವರಿಗೆ ಈ ಬ್ಯಾಂಕುಗಳಿಂದ ಸಾಲ ಸೌಲಭ್ಯವೂ  ಸಿಗದೇ ಹೋಗುತ್ತದೆ. ಅಂತಹವರಿಗೆ ಉಪಯೋಗವಾಗಲಿ ಎಂದೇ ಮೋದಿ ನೇತ್ರತ್ವದ ಕೇಂದ್ರ ಸರಕಾರ ಮುದ್ರಾ ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ.

ಈ ಮುದ್ರಾ ಯೋಜನೆಯಲ್ಲಿ ವ್ಯಾಪಾರ ಮತ್ತು ವ್ಯವಹಾರಗಳನ್ನು ಪ್ರಾರಂಭಿಸಲು ಹಣದ ಅವಶ್ಯಕತೆಗಳಿಗೆ ಅನುಗುಣವಾಗಿ ಮೂರು ವಿಧಗಳನ್ನು ಮಾಡಿದ್ದಾರೆ.

ಶಿಶು ಸಾಲ :-  ಈ ವಿಧದಲ್ಲಿ ನೀವು 50  ಸಾವಿರದವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಸಾಲವು ಚಿಕ್ಕ ಪುಟ್ಟ ಅಂಗಡಿ ಹಾಗೂ ಸಣ್ಣ ಮಟ್ಟದ ಬಿಸಿನೆಸ್ ಮಾಡಲು ಸಹಾಯಕವಾಗಿದೆ.

ಕಿಶೋರ ಸಾಲ :- ಈ ಯೋಜನೆಯಲ್ಲಿ ನಿಮಗೆ 50 ಸಾವಿರದಿಂದ 5 ಲಕ್ಷಗಳವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಇದು ಸ್ವಲ್ಪ ದೊಡ್ಡಮಟ್ಟದ ವ್ಯವಹಾರಗಳಿಗೆ ಸಹಾಯಕವಾಗಲಿದೆ.

ತರುಣ್ ಸಾಲ :- ಈ ಯೋಜನೆಯಲ್ಲಿ ದೊಡ್ಡ ಮಟ್ಟದ ಅಂದರೆ 5 ಲಕ್ಷದಿಂದ 10 ಲಕ್ಷದವರೆಗಿನ ವ್ಯವಹಾರವನ್ನು ಮಾಡಲು ಬಂಡವಾಳವಾಗಿ ಸಾಲವು ಲಭಿಸಲಿದೆ.


ಮುದ್ರಾ ಯೋಜನೆಯಲ್ಲಿ ಸಾಲ ಪಡೆಯಲು ಮಾಡಬೇಕಾಗಿರುವುದೇನು..?


ಮುದ್ರಾ ಯೋಜನೆಯಲ್ಲಿ ಸಾಲವನ್ನು ಪಡೆಯಲು ಸರಿಯಾದ ದಾಖಲೆ ಪತ್ರಗಳೊಂದಿಗೆ ನಿಮ್ಮ ಹತ್ತಿರದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಅರ್ಜಿಯನ್ನು ಸಲ್ಲಿಸಬೇಕು. ಈ ಯೋಜನೆಯಿಂದ ಅತೀ ಶೀಘ್ರದಲ್ಲಿ ಸುಲಭವಾಗಿ ಸಾಲವನ್ನು ಪಡೆಯಬಹುದಾಗಿದೆ.


ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಲಾವುವು..?


ಗುರುತಿನ ಚೀಟಿ : ಇಲೆಕ್ಷನ್ ಕಾರ್ಡ್ ,ರೇಶನ್ ಕಾರ್ಡ್ ಅಥವಾ ಆಧಾರ ಕಾರ್ಡ್

ವಿಳಾಸದ ಧಾಖಲಾತಿ : ಇಲೆಕ್ಷನ್ ಕಾರ್ಡ್ ,ರೇಶನ್ ಕಾರ್ಡ್ ಅಥವಾ ಆಧಾರ ಕಾರ್ಡ್ ಇತರೆ ಯಾವುದಾದರು..

ಇತ್ತೀಚೆಗೆ ತೆಗೆಸಿದ ಬಾವಚಿತ್ರ

ಬಿಸಿನೆಸ್ ಪ್ರಾರಭಿಸಲು ಅವಶ್ಯವಿರುವ ಮೊತ್ತಕ್ಕೆ ಸಂಬಂದಿಸಿದ ದಾಖಲಾತಿ.

ವಿವಿಧ ವಸ್ತುಗಳು, ಮಷಿನ್ಗಳ ಖರೀದಿಯ ಕುರಿತಂತೆ ದಾಖಲಾತಿಗಳು.

ಎಸ್ಸಿ, ಎಸ್ಟಿ ಅಥವಾ ಒಬಿಸಿ ಹೀಗೆ ಸರಕಾರದಿಂದ ವಿವಿಧ ಸೌಲಭ್ಯಪಡೆಯುವ ದಾಖಲಾತಿಗಳು ಅವಶ್ಯವಿರುತ್ತದೆ.


ಮುದ್ರಾ ಯೋಜನೆಯಿಂದ ಕೃಷಿಯೇತರ ಯಾವುದೇ ಬಿಸಿನೆಸ್ ಗಳನ್ನು ಮಾಡಲು ಸುಲಭವಾಗಿ ಸಾಲ ಸೌಲಭ್ಯವು ದೊರೆಯುತ್ತದೆ. ಇಲ್ಲಿ ದೊರೆಯುವ ಸಾಲಕ್ಕೆ ಬದ್ದಿದರವೂ ತುಂಬಾ ಕಡಿಮೆಯಿದ್ದು, ಕಾಗದ ಪತ್ರಗಳ ಅವಶ್ಯಖತೆ ಮತ್ತು ಸಮಯದ ಉಳಿತಾಯವೂ ಆಗುತ್ತದೆ. ಈ ಯೋಜನೆಯಿಂದ ಹಿಂದುಳಿದ ಜನಾಂಗದವರಿಗೆ ಅನೇಕ ಪ್ರಯೋಜನ ಸಹ ಸಿಗಲಿದೆ. ಇಂತಹ ಉಪಯುಕ್ತ ಯೋಜನೆಯನ್ನು ತಂದಂತಹ ಶ್ರೀ ನರೇಂದ್ರ ಮೋದಿಯವರ ನೇತ್ರತ್ವದ ಕೇಂದ್ರ ಸರಕಾರಕ್ಕೆ ಧನ್ಯವಾದವನ್ನು ಹೇಳಲೇಬೇಕು.


YOU MAY ALSO LIKE

No comments