Breaking News

ಕೊಡಗಿಗೆ ನಿರ್ಮಲಾ ಸೀತಾರಾಮನ್ ಬೇಟಿ : ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರಿಗೆ ತರಾಟೆ.

Nirmala-Sitaraman
ನೆರೆಪೀಡಿತ ಕೊಡಗಿನ ಮಕ್ಕಂದೂರಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬೇಟಿ ನೀಡಿದ ಸಂದರ್ಭ 

ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊಡಗಿನ ನೆರೆಪೀಡಿತ ಸೋಮವಾರಪೇಟೆಗೆ ಬೇಟಿ ನೀಡಬೇಕಾಗಿತ್ತು, ಆದರೆ ಕೊನೆಕ್ಷಣದಲ್ಲಿ ಮಕ್ಕಂದೂರಿಗೆ ಕರೆದೊಯ್ಯಲಾಯಿತು. ಈ ಕುರಿತು ನಿರ್ಮಲಾ ಸೀತಾರಾಮನ್ ಅಸಮದಾನಗೊಂಡರು.
ಇದಲ್ಲದೆ ನಗರದ ಜಿಲ್ಲಾಡಳಿತ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸುವ ವೇಳೆ ಪ್ರಾರಂಭದಲ್ಲಿ ಯಾರು ಮಾತನಾಡಬೇಕು ಎಂಬ ಬಗ್ಗೆಯೂ ಗೊಂದಲ ನಿರ್ಮಾಣವಾಯಿತು. ಮೊದಲು ಕೇಂದ್ರ ಸಚಿವೆ ಮಾತನಾಡಬೇಕೇ, ಅಥವಾ ಜಿಲ್ಲಾ ಉಸ್ತುವಾರಿಗಳು ಮಾತನಾಡಬೇಕೇ ಎಂಬ ಗೊಂದಲ ಉಂಟುಮಾಡಿದರು.


ಈ ಕಾರಣಗಳಿಂದ ಕೋಪಗೊಂಡ ಸಚಿವೆ, “ಕೇಂದ್ರ ಸಚಿವೆಯಾದ ನಾನು ಜಿಲ್ಲಾ ಉಸ್ತುವಾರಿ ಸಚಿವರ ಮಾತು ಕೇಳಬೇಕೆ? ನಿಮ್ಮಲ್ಲಿ ಬಿನ್ನಾಭಿಪ್ರಾಯಗಲಿದ್ದರೆ ಮೊದಲು ಪರಿಹರಿಸಿಕೊಳ್ಳಿ” ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಾ.ರಾ. ಮಹೇಶ್ ಹಾಗೂ ಜಿಲಾಧಿಕಾರಿ ಶ್ರೀವಿದ್ಯಾ ವಿರುದ್ದ ಗರಂ ಆದರು. ಮೊದಲು ಹೋಗಬೇಕೆಂದು ನಿಗಧಿಯಾದ ಸೋಮವಾರಪೇಟೆಯನ್ನು ಬಿಟ್ಟು ಕುಶಾಲನಗರದ ಮಕ್ಕಂದೂರಿಗೆ ಕರೆದುಕೊಂಡು ಹೊಗೆದ್ದಿರಿ. ನಿಮ್ಮ ರಾಜಕೀಯ ಲಾಭ ನಷ್ಟ ಇಂತ ಸಂಧರ್ಭದಲ್ಲಿ ತೋರಿಸಬೇಡಿ. ಸಂಕಷ್ಟದಲ್ಲಿರುವ ಜನತೆಗೆ ನೆರವು ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಸಾ.ರಾ. ಮಹೇಶ್ ವಿರುದ್ದ ಕಿಡಿಕಾರಿದರು.

ಕೇಂದ್ರ ಸಚಿವರ ಜೊತೆಯಲ್ಲಿ ಶಿಷ್ಟಾಚಾರದ ಪ್ರಕಾರ ನಡೆದುಕೊಳ್ಳಬೇಕೆಂದು ಗೊತ್ತಿದೆಯೋ ಇಲ್ಲವೋ ನನಗೆ ಅರ್ಥವಾಗುತ್ತಿಲ್ಲ, ಮೊದಲು ಸಚಿವರು ಮಾತನಾಡಬೇಕೆಂದು ಹೇಳುತ್ತಿರಿ, ಜಿಲ್ಲಾಧಿಕಾರಿಗಳು ಮಾತನಾಡಲಿ ಎಂದು ನೀವು ಹೇಳುತ್ತಿರಿ ಯಾರ ಮಾತನ್ನು ಕೇಳಿ ಪತ್ರಿಕಾಗೋಷ್ಠಿ ನಡೆಸಬೇಕು..? ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಎಚ್ಚರಿಸಿದರು.





 SPONSORED CONTENT



No comments