ಬಹುನಿರೀಕ್ಷಿತ ಅಂಚೆ ಪೇಮೆಂಟ್ ಬ್ಯಾಂಕ್ ಗೆ 21 ರಂದು ಪ್ರಧಾನಿ ಮೋದಿ ಚಾಲನೆ - News Desk

Sunday, August 5, 2018

ಬಹುನಿರೀಕ್ಷಿತ ಅಂಚೆ ಪೇಮೆಂಟ್ ಬ್ಯಾಂಕ್ ಗೆ 21 ರಂದು ಪ್ರಧಾನಿ ಮೋದಿ ಚಾಲನೆ

Indian-Post-payment-Bank
ಭಾರತೀಯ ಅಂಚೆಯ ಬಹುನಿರೀಕ್ಷಿತ ಪಾವತಿ ಬ್ಯಾಂಕಿಂಗ್ ಸೇವೆ (Indian Post Payment Bank) ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಗಸ್ಟ್ 21 ರಂದು ಚಾಲನೆ ನೀಡಲಿದ್ದಾರೆ. 

ದೇಶದಾದ್ಯಂತ 648 ಶಾಖೆಗಳನ್ನು ಅಗಸ್ಟ್ 21 ರಿಂದ ಕಾರ್ಯನಿರ್ವಹಿಸಲಿದೆ. ಅಂಚೆ ಇಲಾಖೆ ದೇಶದಾದ್ಯಂತ 1.55 ಲಕ್ಷ ಅಂಚೆ ಕಚೇರಿಗಳನ್ನು ಹೊಂದಿದ್ದು, ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕಿಂಗ್ ಸೇವೆಯನ್ನು ಒದಗಿಸಲು ನೆರವಾಗಲಿದೆ.

ಗ್ರಾಮೀಣ ಮಟ್ಟದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಐಪಿಪಿಬಿ ಒದಲಿಸಲಿದ್ದು, ಮೊಬೈಲ್  ಆಪ್ ಮೂಲಕ ಅಥವಾ ಅಂಚೆ ಕಚೇರಿಗೆ ಬೇಟಿ ನೀಡುವ ಮೂಲಕ ಯಾವುದೇ ಖಾತೆಗೆ ಹಣವನ್ನು ವರ್ಗಾಯಿಸಲು ನೆರವಾಗಲಿದೆ. ಸರಕಾರ ನರೇಗಾ ವೇತನ, ಸಬ್ಸಿಡಿ, ಪಿಂಚಣಿ ಇತ್ಯಾದಿಗಳನ್ನು ವಿತರಿಸಲು ಅಂಚೆ ಪೇಮೆಂಟ್ ಬ್ಯಾಂಕ್ ಸೇವೆಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. 

ಐಪಿಪಿಬಿ ಆಪ್ ಕೂಡ  ಅಂದೇ ಬಿಡುಗಡೆಯಾಗಲಿದ್ದು, ಮೊಬೈಲ್ ರಿಚಾರ್ಜ್, ಬಿಲ್ ಪಾವರಿ, ವಿದ್ಯುತ್ ಬಿಲ್ಲು , ಡಿಟಿಹೆಚ್  ಪಾವತಿ, ನೀರಿನ ಬಿಲ್, ಕಾಲೇಜು ಶುಲ್ಕ ಇತ್ಯಾದಿ ಸೇರಿದಂತೆ 100 ಕ್ಕೂ ಹೆಚ್ಚು ಸಂಸ್ಥೆಗಳ ಸೇವೆಗಳನ್ನು ಒದಗಿಸಲಿದೆ.



YOU MAY ALSO LIKE

No comments:

Post a Comment