Breaking News

ಮೋದಿ ಹತ್ಯೆಗೆ ಸಂಚು ಪ್ರಕರಣ : ಐವರ ಬಂದನ ..!

Varvar-rao-Navlakah
ವರವರ ರಾವ್  ಮತ್ತು  ಗೌತಮ್ ನವಲಖಾ 

ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮತ್ತು ಭೀಮಾ ಕೋರೆಗಾಂವ್ ಗಲಭೆಗೆ ಸಂಬಂಧಿಸಿದಂತೆ  ಪುಣೆ ಪೊಲೀಸರು ಇಂದು ದೇಶದ ಹಲವೆಡೆ ದಾಳಿ ನಡೆಸಿ ಖ್ಯಾತ ಬರಹಗಾರ ವರವರ ರಾವ್ ಸೇರಿದಂತೆ ಒಟ್ಟು ಐವರು ಎಡಪಂತೀಯ ಹೋರಾಟಗಾರರನ್ನು ಬಂಧಿಸಲಾಗಿದೆ.

ಹೈದರಾಬಾದ್ ನಲ್ಲಿರುವ ವರವರ ರಾವ್ ಮನೆ ಸೇರಿದಂತೆ ಹೋರಾಟಗಾರರಾದ ವೆರ್ನಾನ್ ಗೊಂಜಾಲ್ವಿಸ್, ಅರುಣ್ ಪರೇರಾ, ಸುಧಾ ಭಾರದ್ವಾಜ್, ಇವರ ತಂದೆ ಸ್ಟಾನ್ ಸ್ವಾಮಿ ಹಾಗೂ ನಾಗರೀಕ ಹಕ್ಕು ಕಾರ್ಯಕರ್ತ ಗೌತಮ್ ನವಲಖಾ ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಅವರನ್ನು ಬಂದಿಸಲಾಗಿದೆ.

ಭೀಮಾ-ಕೋರೆಗಾಂವ್ ಪ್ರಕರಣಕ್ಕೆ ಸಂಭಂದಿಸಿದಂತೆ ತನಿಕೆ ನಡೆಸುತ್ತಿರುವ ಪುಣೆ ಪೊಲೀಸರು, ನಕ್ಸಲರ ಕೈವಾಡವಿದೆ ಎಂಬ ಅನುಮಾನದ ಮೇಲೆ ನಕ್ಸಲರನ್ನು ಬಂದಿಸಿದ್ದರು. ಆಗ ರಾಜೀವ್ ಗಾಂಧಿ ಹತ್ಯೆಯ ಮಾದರಿಯಲ್ಲಿಯೇ ಮೋದಿಯವರ ಹತ್ಯೆಗೂ ಸಂಚು ರೂಪಿಸಲಾಗಿತ್ತೆಂದು ಬಂದಿತ ನಕ್ಸಲರಿಂದ ಮಾಹಿತಿ ತಿಳಿದು ಬಂದಿತ್ತು. 

ಭೀಮಾ-ಕೋರೆಗಾಂವ್ ಕಾರ್ಯಕ್ರಮದಲ್ಲಿ   ಈ ಐವರು ಪ್ರಚೋಧನಕಾರಿ ಭಾಷಣ ಮಾಡಿದ್ದೆ ಗಲಭೆಗೆ ಕಾರಣವಾಗಿತ್ತೆಂದು ಹೇಳಲಾಗುತ್ತದೆ. ಇವರು ನಕ್ಸಲರ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇರೆಗೆ ಐವರು ಎಡಪಂತೀಯ ಚಿಂತಕರು ಹಾಗೂ ಹೋರಾಟಗಾರರನ್ನು ಬಂದಿಸಲಾಗಿದೆ. 

 SPONSORED CONTENT


No comments