Breaking News

ವೈರಲ್ ಆದ ಮೋದಿಯ ಈ ವಿಡಿಯೋ ..

mage@Tweeted by PIB
ಪಿಐಬಿ ಟ್ವೀಟ್ ಮಾಡಿದ ವಿಡಿಯೋದ ಚಿತ್ರ 

ಸಾಮಾನ್ಯವಾಗಿ ರಾಜಕೀಯ ನಾಯಕರು, ಹಿರಿಯ ಅಧಿಕಾರಿಗಳು  ಸಂಚಾರಿ ನಿಯಮ ಪಾಲಸುವುದು ಕಡಿಮೆಯೇ. ಆದರೆ ಪ್ರಧಾನಿ ಮೋದಿಯವರ ವೈರಲ್ ಆದ ಒಂದು ವಿಡಿಯೋದಲ್ಲಿ ನಮ್ಮ ಜನನಾಯಕನ ಸಂಚಾರಿ ನಿಯಮ ಪಾಲನೆ ಜಗಜ್ಜಾಹೀರಾಗಿದೆ.

ಪಿಐಬಿ ಬಿಡುಗಡೆ ಮಾಡಿದ ಒಂದು ವಿಡಿಯೋದಲ್ಲಿ ನರೇಂದ್ರ ಮೋದಿಯವರು ಜನರತ್ತ ಕೈಬೀಸಿ ತಮ್ಮ ಕಾರಿನಲ್ಲಿ ಕುಳಿತುಕೊಂಡು ಮೊದಲಿಗೆ ಸೀಟ್ ಬೆಲ್ಟ್ ಹಾಕಿಕೊಳ್ಳುತ್ತಾರೆ. ಈ ಮೂಲಕ ಸಂಚಾರಿ ನಿಯಮ ಪಾಲನೆಯಲ್ಲಿ ಪ್ರಧಾನಿ ಎಲ್ಲಾರಿಗೂ ಮಾದರಿಯಾಗಿದ್ದಾರೆ.

ಪಿಐಬಿ  ಇದೀಗ  ಸೀಟ್ ಬೆಲ್ಟ್ ಧರಿಸಿ ಎಂಬ ವಾಕ್ಯದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಿತ್ತರಿಸಿದ್ದು, ಅದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ.

ಟ್ವೀಟರ್ ನಲ್ಲಿ  ಈ ವಿಡಿಯೋ ಕುರಿತು ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕಾನೂನು ಪಾಲಿಸುವ ಪ್ರಧಾನಿ ಮೋದಿ ನಮ್ಮ ನಿಜವಾದ ನಾಯಕ ಎಂದು ಕೊಂಡಾಡುತ್ತಿದ್ದಾರೆ.   SPONSORED CONTENT


No comments