ಜಿಯೋದಿಂದ ಗ್ರಾಹಕರಿಗೆ ಮತ್ತೊಂದು ಅಪಾರ್..! - News Desk

Saturday, August 11, 2018

ಜಿಯೋದಿಂದ ಗ್ರಾಹಕರಿಗೆ ಮತ್ತೊಂದು ಅಪಾರ್..!


ಭಾರತದಲ್ಲಿ ಇಂಟರ್ನೆಟ್ ಕ್ರಾಂತಿಯನ್ನು ಮಾಡಿದ ಜಿಯೋ ತನ್ನ ಗ್ರಾಹಕರಿಗೆ ದಿನಕ್ಕೆ ಒಂದೂವರೆ ಜಿಬಿ ಇಂಟರ್ನೆಟ್ ಬಳಕೆಯನ್ನು ನೀಡಿ ಸುದ್ದಿಯಲ್ಲಿತ್ತು. ಆದರೆ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ತನ್ನ ಗ್ರಾಹಕರಿಗೆ 2 ಜಿಬಿ ಇಂಟರ್ನೆಟ್ ನೀಡಲು ಹೊರಟಿದೆ.

ಹೌದು ..! ನೀವು ಓದಿರುವ ಸುದ್ದಿ ನಿಜವಾಗಿದೆ. ಜಿಯೋ ಗ್ರಾಹಕರು ಮೈ ಜಿಯೋ ಆಪ್ ನಲ್ಲಿ 399 ರುಪಾಯಿಯ ರಿಚಾರ್ಜ್ ನ್ನು ಮಾಡಿಕೊಂಡರೆ ಈ ಸೌಲಭ್ಯವು ದೊರೆಯಲಿದೆ. ಈ ಮೂಲಕ ಇಂಟರ್ನೆಟ್ ಬಳಕೆದಾರರಿಗೆ ಮತ್ತಷ್ಟು ಡೇಟಾ ದೊರೆತಂತಾಗುತ್ತದೆ. ಅಲ್ಲದೇ ಈಗ ಒನ್ಲೈನ್ ಟಿವಿ ತಾಣಗಳತ್ತ ಜನರು ಮುಖ ಮಾಡಿದ್ದು, ಈ ಡೇಟಾ ಹೆಚ್ಚಿನ ಬಳಕೆ ಸೌಲಭ್ಯ ಉಪಯುಕ್ತವಾಗಲಿದೆ.

ಜಿಯೋವು ತನ್ನ ಗ್ರಾಹಕರಿಗೆ ಹೆಚ್ಚಿನ ಡೇಟಾ ಬಳಕೆಯ ಅವಕಾಶ ನೀಡಿರುವುದು, ನೆಟ್ ಪ್ಲಿಕ್ಸ್ , ಹಾಟ್ ಸ್ಟಾರ್  ಮೊದಲಾದ ತಾಣಗಳ ವೀಕ್ಷಕರಿಗೆ ಅನುಕೂಲವಾಗುವಂತೆ ಮಾಡಿದೆ.
YOU MAY ALSO LIKE

No comments:

Post a Comment