Breaking News

ಅಗಸ್ಟ್ 11ಕ್ಕೆ ಪಾಕ್ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ

Imran_khan
ಪ್ರಧಾನಿ ಅಭ್ಯರ್ಥಿ ಇಮ್ರಾನ್ ಖಾನ್ 

ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಪಾಕಿಸ್ತಾನ್ ತೆಹರಿಕ್ ಇನ್ಸಾಪ್ ಪಕ್ಷದ ನಾಯಕ ಇಮ್ರಾನ್ ಖಾನ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಜುಲೈ 25 ರಂದು ನಡೆದಿದ್ದ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹರಿಕ್ ಇನ್ಸಾಪ್ (ಪಿಪಿಐ) ಪಕ್ಷವು 115 ಸೀಟುಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಪಿಪಿಪಿ 43, ಪಿಎಂಎಲ್ ಏನ್ 63 ಹಾಗೂ ಇತರೆ 47 ಸ್ಥಾನಗಳನ್ನು ಗೆದ್ದಿದ್ದವು.

ರಾಷ್ಟ್ರೀಯ ಅಸೆಂಬ್ಲಿಯಲ್ಲಿ 272 ಸೀಟುಗಳಲ್ಲಿ 270 ಸ್ಥಾನಗಳ ಫಲಿತಾಂಶ ಬಂದಿದ್ದು, ಉಳಿದ ಪಕ್ಷಗಳ ಸಹಾಯದಿಂದ ಸರಕಾರ ರಚಿಸಲು ಇಮ್ರಾನ್ ಖಾನ್ ಮುಂದಾಗಿದ್ದಾರೆ.  ಇಲ್ಲಿ ಬಹುಮತಕ್ಕೆ ಬೇಕಾಗುವ ಮ್ಯಾಜಿಕ್ ನಂಬರ್ 172 ಆಗಿದೆ. ಈಗಾಗಲೇ 115 ಸ್ಥಾನಗಳಲ್ಲಿ ಜಯಗಳಿಸಿರುವ ಪಿಪಿಐ ಸರಕಾರವನ್ನು ಇತರ ಸಣ್ಣ ಪುಟ್ಟ ಪಕ್ಷಗಳೊಂದಿಗೆ ರಚಿಸಲು ಮುಂದಾಗಿದೆ.

ಆಯ್ಕೆಯಾದ ಸಂಭಾವ್ಯ ಪ್ರಧಾನಿ ಅಭ್ಯರ್ಥಿ ಇಮ್ರಾನ್ ಖಾನ್ ಅವರಿಗೆ ಪೋನ್ ಕರೆಮಾಡಿ ಮೋದಿಯವರು ಅಭಿನಂದನೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇದರಿಂದ  ಎರಡು ದೇಶಗಳ ರಾಜತಾಂತ್ರಿಕ ಹೊಂದಾಣಿಕೆಗೆ ಉತ್ತಮ ಬಾಂದವ್ಯ ಏರ್ಪಡಲಿದೆ ಎಂದು ಹೇಳಲಾಗುತ್ತಿದೆ.

ಅಗಸ್ಟ್ 11 ರಂದು ಇಮ್ರಾನ್ ಖಾನ್ ಪ್ರಧಾನಿ ಪ್ರಮಾಣ ವಚನ ಸಮಾರಂಬವನ್ನು ಅದ್ದೂರಿಯಾಗಿ ನಡೆಸಲು ಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನೂ ಸೇರಿದಂತೆ ವಿವಿಧ ದೇಶಗಳ ನಾಯಕರುಗಳನ್ನು ಆಹ್ವಾನಿಸುವ ಕುರಿತು ವಿದೇಶಾಂಗ ಕಚೇರಿಗೆ ಮಾಹಿತಿ ನೀಡಲಾಗಿದೆ. ಅಷ್ಟೇ ಅಲ್ಲದೇ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ , ಕಪಿಲ್ ದೇವ್, ನವ್ ಜೋತ್ ಸಿಧು ಹಾಗೂ ನಟ ಅಮೀರ್ ಖಾನ್ ಅವರಿಗೂ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ. 
YOU MAY ALSO LIKE

No comments