Breaking News

ವಾಟ್ಸ್ ಆಪ್ ಸಂದೇಶಕ್ಕೆ ಕಡಿವಾಣ.! ಸಂದೇಶಕ್ಕೆ ಮಿತಿ ಹೇರಲಾಗಿದ್ದು ಏಕೆ ಗೊತ್ತೇ ?

whatsapp

ವಾಟ್ಸ್ ಅಪ್ ಇಂದು ಎಲ್ಲರ ನೆಚ್ಚಿನ ಸಾಮಾಜಿಕ ಜಾಲತಾಣಗಳಲ್ಲೊಂದು. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲರು ಇದರ ಬಳಕೆದಾರರೆ. ಆದರೆ ಇದರಲ್ಲಿ ಅತೀ ಬೇಗ ಸುಳ್ಳು ಸುದ್ದಿಗಳನ್ನು ಹರಡಿ ಜನರಿಗೆ ತೊಂದರೆಯನ್ನು ಉಂಟುಮಾಡಲಾಗುತ್ತಿದೆ. ಈ ಸಮಸ್ಯೆಯನ್ನು ನಿಯಂತ್ರಿಸಲು ವಾಟ್ಸ್ ಅಪ್ ಸಂಸ್ಥೆ ಒಂದು ಕ್ರಮವನ್ನು ಕೈಗೊಂಡಿದೆ. ಅದೇನೆಂದರೆ ವಾಟ್ಸ್ ಅಪ್ ಬಳಕೆದಾರರು ಐದಕ್ಕಿಂತ ಹೆಚ್ಚು ಸಂದೇಶ,ಚಿತ್ರ ಮತ್ತು ವಿಡಿಯೋ ಗಳನ್ನೂ ಒಟ್ಟಿಗೆ ಕಳುಹಿಸಲು ಅಸಾಧ್ಯ. ಈ ನಿಯಮವು ಜಾರಿಯಾಗಿದ್ದು  ಸುಳ್ಳು ಸುದ್ದಿಗಳ ಪ್ರಸರಣವನ್ನು ತಡೆಗಟ್ಟಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಜಾಗತಿಕ ಮಟ್ಟದಲ್ಲಿ ಈ ಮಿತಿಯನ್ನು ೨೦ ಕ್ಕೆ ನಿಗದಿಗೊಳಿಸಲಾಗಿದೆ. ಇಲ್ಲಿಯವರೆಗೆ ವಾಟ್ಸ್ ಅಪ್ ಬಳಕೆದಾರರಿಗೆ ಸಂದೇಶ ಹಂಚಿಕೊಳ್ಳಲು ಯಾವುದೇ ಮಿತಿ ಇರಲಿಲ್ಲ. ಬಳಕೆದಾರರು ಏಕಕಾಲಕ್ಕೆ ಬೇಕಾದಷ್ಟು ಸಂದೇಶಗಳನ್ನು ಹಂಚಿಕೊಳ್ಳಬಹುದಾಗಿತ್ತು. ಸಂದೇಶ ರವಾನೆಯನ್ನು ಐದಕ್ಕೆ ಮಿತಿಗೊಳಿಸಿರುವುದರಿಂದ  ಇನ್ನು ಮುಂದೆ ಸುಳ್ಳು ಸುದ್ದಿ ಹರಡುವುದು ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರಬಹುದೆಂದು ಅಂದಾಜಿಸಲಾಗಿದೆ.




YOU MAY ALSO LIKE

No comments