Breaking News

ಏಷ್ಯನ್ ಕ್ರೀಡಾಕೂಟ: ಚಿನ್ನ ಗೆದ್ದು ಇತಿಹಾಸ ಬರೆದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್

ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್
ವಿನೇಶ್ ಪೋಗಟ್ ಜಯಗಳಿಸಿದ ಕ್ಷಣ 

ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಚಿನ್ನ ಗೆಲ್ಲುವ ಮೂಲಕ ಮೊದಲ ಬಾರಿಗೆ ಭಾರತ ಏಷ್ಯನ್ ಕ್ರೀಡಾಕೂಟದ ಈ ವಿಭಾಗದಲ್ಲಿ ಚಿನ್ನ ಗೆದ್ದ ಸಾಧನೆಯನ್ನು ಮಾಡಿದ್ದಾರೆ.

ಏಷ್ಯನ್ ಕ್ರಿಡಾಕೂಟದಲ್ಲಿ ಮಹಿಳೆಯರ ಪ್ರಿಸ್ಟೈಲ್ 50 ಕೆಜಿ ಕಿಸ್ತಿ ವಿಭಾಗದಲ್ಲಿ ಜಪಾನಿನ  ಯೂಕಿ ಐರೀ ಅವರನ್ನು ಸೋಲಿಸುವ ಮೂಲಕ ಚಿನ್ನವನ್ನು ಮುಡಿಗೇರಿಸಿಕೊಂಡಿದ್ದಾರೆ.

ಮೊದಲ ಸುತ್ತಿನಲ್ಲಿ ಯೂಕಿ ವಿರುದ್ದ 4-೦ ಮುನ್ನಡೆ ಸಾದಿಸಿ, ಅಂತಿಮವಾಗಿ 6-2 ಅಂತರದಲ್ಲಿ ಗೆಲುವು ಸಾದಿಸಿದ್ದಾರೆ.

ಈ ಸಾಧನೆಯ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಕ್ರಿಡಾಕೂಟದಲ್ಲಿ ಭಾರತ  ಒಟ್ಟಾರೆ ಆರು ಪದಕ ಗಳಿಸಿದ್ದು, ಎರಡು ಚಿನ್ನ , ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಗೆದ್ದುಕೊಂಡಿದೆ.




 SPONSORED CONTENT


No comments