Breaking News

4 ನೇ ಟೆಸ್ಟ್ : ಮೊದಲ ದಿನದಾಟ ಮುಕ್ತಾಯ, ಯಾವುದೇ ವಿಕೆಟ್ ನಷ್ಟವಿಲ್ಲದೇ ಭಾರತ 19 ರನ್

4th-test-match-day-1-stumps-india-trail-by-227-runs-against-england

ತೀವ್ರ ಕುತೂಹಲ ಕೆರಳಿಸಿದ್ದ ಇಂಗ್ಲೆಂಡ್ ವಿರುದ್ದದ ನಾಲ್ಕನೆಯ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದ್ದು, ಆಂಗ್ಲರ ವಿರುದ್ದ  ಭಾರತೀಯ ಬೌಲರಗಳ ಕರಾರುವಕ್ಕಾದ ಬೌಲಿಂಗ್  ದಾಳಿಗೆ  246 ರನ್ಗಳಿಗೆ  ಆಲೌಟ್ ಆಯಿತು. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲಂಡ್ ತಂಡದ ಮೇಲೆ ಸವಾರಿ ಮಾಡಿದ ಭಾರತೀಯ ಬೌಲರ್ ಗಳು ಅವರನ್ನು  ಕೇವಲ 246 ರನ್ನುಗಳಿಗೆ ಕಟ್ಟಿಹಾಕಲು ಯಶಸ್ವಿಯಾದರು. ಇಂಗ್ಲಂಡ್ ಪರ ಮೊಯಿನ್ ಅಲಿ(40) ಸ್ಯಾಮ್ ಕರ್ರನ್(78)  ಮಾತ್ರ ಪ್ರತಿರೋದದ ಹೋರಾಟ ನಡೆಸಿದರು. ಉಳಿದೆಲ್ಲಾ ಆಟಗಾರರು ಕ್ರಿಸ್ಗೆ ಬಂದಷ್ಟೇ  ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಇಂಗ್ಲೆಂಡ್ ತಂದ 246 ರನ್ನುಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. 

ಇಂಗ್ಲೆಂಡ್ ನೀಡಿದ 246 ರನ್ನುಗಳನ್ನು ಬೆನ್ನತ್ತಿದ ಭಾರತ ತಂದ ದಿನದಾಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 19 ರನ್  ಕಲೆಹಾಕಿತು. ಶಿಕರ್ ದವನ್ ಮತ್ತು ಕೆ ಎಲ್ ರಾಹುಲ್ ತಮ್ಮ ಕ್ರಿಸ್ ನ್ನು ಕಾಯ್ದುಕೊಂಡಿದ್ದಾರೆ.

 SPONSORED CONTENT


No comments