Breaking News

ಏಷ್ಯನ್ ಗೇಮ್ಸ್: 25 ಮೀ ಪಿಸ್ತೂಲ್ ವಿಭಾಗದಲ್ಲಿ ರಾಹಿ ಸರ್ನೋಬಾತ್ ಗೆ ಚಿನ್ನ.

Rahi Jeevan Sarnobat
ರಾಹಿ ಸರ್ನೋಬತ್ ಪ್ರಶಸ್ತಿ ಗೆದ್ದ ಸಂದರ್ಭ 

ಇಂಡೋನೇಷಿಯದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಇಂದು ಸಹ ಮುಂದುವರೆದಿದ್ದು, ಮಹಿಳೆಯರ 25 ಮೀ ಪಿಸ್ತೂಲ್ ವಿಭಾಗದಲ್ಲಿ ರಾಹಿ ಸರ್ನೋಬತ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಶುಟರ್ ಸೌರಬ್ ಚೌದರಿ ಚಿನ್ನ ತಂದುಕೊಟ್ಟರೆ, ಮಹಿಳೆಯರ ವಿಭಾಗದಿಂದ ರಾಹಿ ಚಿನ್ನ ಗೆದ್ದಿದ್ದು ಭಾರತೀಯರಿಗೆ ಸಂತಸ ತಂದಿದೆ.

ಬೇಸರದ ಸಂಗತಿಯೆಂದರೆ ಸ್ಟಾರ್ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಅವರು ತೀವ್ರ ಮಂಡಿನೋವಿನ ಕಾರಣದಿಂದಾಗಿ ಈ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ. ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ತೀವ್ರ ನಿರಾಶೆ ಉಂಟಾಗಿದೆ.
ಈ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ. ಇದರಲ್ಲಿ ನಾಲ್ಕು ಚಿನ್ನ, ಮೂರು ಬೆಳ್ಳಿ ಹಾಗೂ ನಾಲ್ಕು ಕಂಚು ಸೇರಿವೆ. SPONSORED CONTENTNo comments