Breaking News

ರಾಹುಲ್ ಕಣ್ಣು ಮಿಟುಕಿಸಿದ್ದಕ್ಕೆ ಕಣ್ಸನ್ನೆ ಬೆಡಗಿ ಹೇಳಿದ್ದೇನು?


ಶುಕ್ರವಾರದಂದು ಲೋಕಸಭೆಯಲ್ಲಿ ನಡೆದ ಅವಿಶ್ವಾಸ ನಿರ್ಣಯ ಚರ್ಚೆಯ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಭಾಷಣದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ತೆರಳಿ ಅವರನ್ನು ಹಗ್ ಮಾಡಿದ್ದರು. ನಂತರ ತಮ್ಮ ಸ್ಥಾನದಲ್ಲಿ ಕುಳಿತ ರಾಹುಲ್ ಗಾಂಧಿ ಪಕ್ಷದ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಕಡೆ ತಿರುಗಿ ಕಣ್ಣು ಮಿಟುಕಿಸಿದ್ದರು. ರಾಹುಲ್ ಗಾಂಧಿ ಅವರ ಈ ನಡೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

ಕೆಲವರು ರಾಹುಲ್ ಗಾಂಧಿ ಕಣ್ಣು ಮಿಟುಕಿಸಿದ್ದ ಶೈಲಿಯನ್ನು 'ಒರು ಅದಾರ್ ಲವ್' ಚಿತ್ರದಲ್ಲಿ ವಿಶಿಷ್ಟವಾಗಿ ಕಣ್ಣು ಮಿಟುಕಿಸುವ ಮೂಲಕ ರಾತ್ರೋರಾತ್ರಿ ಪ್ರಸಿದ್ಧಿಗೆ ಬಂದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಹೋಲಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾ ಪ್ರಕಾಶ್, "ರಾಹುಲ್ ಗಾಂಧಿ ನನಗಿಂತ ಚೆನ್ನಾಗಿ ಕಣ್ಸನ್ನೆ ಮಾಡಿದ್ದಾರೆ" ಎಂದು ಹೇಳಿದ್ದಾರೆ.YOU MAY ALSO LIKE

No comments