Breaking News

ಇಂದು ಸಂಭವಿಸಲಿದೆ ಶತಮಾನದ ಧೀರ್ಘಾವಧಿ ಚಂದ್ರಗ್ರಹಣ

ಚಂದ್ರಗ್ರಹಣ

ಇಂದು ನಡೆಯಲಿರುವ ಚಂದ್ರ ಗ್ರಹಣವು ಆಕಾಶದಲ್ಲಿ ನಡೆಯುವ ಕೌತುಕಕ್ಕೆ ಕಾರಣವಾಗಿದೆ. ಈ ಪ್ರಕೃತಿಯ ವಿಸ್ಮಯವು ಶತಮಾನದಲ್ಲಿಯೇ ಉಂಟಾಗುತ್ತಿರುವ ದಿರ್ಘಾವಧಿಯ ಚಂದ್ರಗ್ರಹಣವಾಗಿದೆ.

ಇಂದು ರಾತ್ರಿ 11.54 ಕ್ಕೆ ಚಂದ್ರ ಗ್ರಹಣವು ಆರಂಭವಾಗಲಿದ್ದು, ಮುಂಜಾನೆ 3.49ಕ್ಕೆ ಗ್ರಹಣ ಬಿಡಲಿದೆ. ಮದ್ಯರಾತ್ರಿ ಸುಮಾರು 1 ಗಂಟೆಯಿಂದ 2.43 ರ ವರೆಗೆ ಸಂಪೂರ್ಣ ಗ್ರಹಣವು ಗೋಚರಿಸಲಿದೆ. ಅಲ್ಲದೇ ಇದೆ ಸಮಯದಲ್ಲಿ  ರಕ್ತವರ್ಣಕ್ಕೆ ತಿರುಗಿ ನಭೋಮಂಡಲದಲ್ಲಿ ವಿಸ್ಮಯವನ್ನು ಸೃಷ್ಠಿಸಲಿದ್ದಾನೆ. 21 ನೇ ಶತಮಾನದ ಅತಿ ಸುಧೀರ್ಘ ಖಗ್ರಾಸ ಚಂದ್ರಗ್ರಹಣ ಇದಾಗಿದ್ದು, ಇದನ್ನು  ಮತ್ತೊಮ್ಮೆ ನೋಡಲು  104 ವರ್ಷಗಳು ಕಾಯಬೇಕಿದೆ.

ಭಾರತ ಸೇರಿದಂತೆ ಏಷ್ಯದ ಬಹುತೇಕ ಭಾಗದಲ್ಲಿ ಇ ಬ್ಲಡ್ ಮೂನ್ ಗೋಚರಿಸಲಿದೆ. ಅಲ್ಲದೇ ಈ ವಿದ್ಯಮಾನವನ್ನು ಬರಿಗಣ್ಣಿನಿಂದ ನೋಡಬಹುದಾಗಿದ್ದು, ವಾತಾವರಣದಲ್ಲಿ ಹಾದುಹೋಗುವ ಸೂರ್ಯನಕಿರಣಗಳ ಚದುರುವಿಕೆಯಿಂದಾಗಿ ಈ ಸಂಧರ್ಭದಲ್ಲಿ ಚಂದ್ರ ರಕ್ತವರ್ನದಲ್ಲಿ ಗೋಚರಿಸಲಿದ್ದಾನೆ.  ಮಂಗಳನು ಭೂಮಿಗೆ ಹತ್ತಿರದಲ್ಲಿ ಬಂದಿರುವುದರಿಂದ ಸೂರ್ಯ, ಭೂಮಿ ಮತ್ತು ಮಂಗಳ ಒಂದೇ ಸಾಲಿನಲ್ಲಿ ಬರಲಿದ್ದಾರೆ.

ಧಾರ್ಮಿಕವಾಗಿ ನೋಡುವುದಾದರೆ, ಪಂಚಗಗಳ ಪ್ರಕಾರ ಉತ್ತರಾಷಾಡ ಮತ್ತು ಶ್ರಾವಣಾ ನಕ್ಷತ್ರ ಹಾಗೂ ಮಕರ ರಾಶಿಯಲ್ಲಿ ಕೇತು ಗ್ರಸ್ಥ ಚಂದ್ರ ಗ್ರಹಣವು ಸಂಭವಿಸಲಿದೆ. ಉತ್ತರಾಷಾಡ ಮತ್ತು ಶ್ರಾವಣಾ ನಕ್ಷತ್ರದವರು ಮತ್ತು ಮಕರ, ಧನು ರಾಶಿಯವರು ಈ ಗ್ರಹಣದಿಂದ ಕೆಟ್ಟ ಪಲವನ್ನು ಪಡೆಯಲಿದ್ದಾರೆ. ಆದ್ದರಿಂದ ಗ್ರಹಣದ ಸಮಯದಲ್ಲಿ ದೇವರ ಜಪ, ಧ್ಯಾನ ನಮಸ್ಕಾರ ಮತ್ತು ಧಾನಗಳಲ್ಲಿ ಭಾಗಿಯಾಗುವುದು ಸೂಕ್ತ.

ಚಂದ್ರಗ್ರಹಣ


ಗ್ರಹಣದ ಸಮಯದಲ್ಲಿ ಪಾಲಿಸತಕ್ಕ ಆಚರಣೆಗಳು 

ಗ್ರಹಣದ ಕಾಲದಲ್ಲಿ ಯಾವುದೇ ದ್ರವ ಅಥವಾ ಘನ ಆಹಾರವನ್ನು ಸ್ವಿಕರಿಸಬಾರದು.

ಗ್ರಹಣದ ಆರಂಭದಿಂದ ಅಂತ್ಯದವರೆಗೆ ಧರಿಸಿದ ಬಟ್ಟೆಗಳ ಸಮೇತ ಸ್ನಾನ ಮಾಡಬೇಕು.

ಗ್ರಹಣ ಮೋಕ್ಷ ಕಾಲದ ನಂತರವೇ ಸ್ನಾನ,ಪುಜೆಸಲ್ಲಿಸಿ ಅಡುಗೆ ಮಾಡಿ ಊಟ ಮಾಡಬೇಕು.

ಗ್ರಹಣಕ್ಕಿಂತ ಮುಂಚೆ ಮಾಡಿಟ್ಟ ಅಥವಾ ಗ್ರಹಣ ಕಾಲದಲ್ಲಿ ಮಾಡಿದ ಆಹಾರವನ್ನು ತಿನ್ನಬಾರದು.

ಗ್ರಹಣ ಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನವು ಅತೀ ಶ್ರೇಷ್ಠ . ಸಮುದ್ರ ಸ್ನಾನ ಸರ್ವೋತ್ತಮ.

ಗ್ರಹಣ  ಆರಂಭದಿಂದ ಅಂತ್ಯದವರೆಗೂ ದೇವರ ಸ್ಮರಣೆ., ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು.


ಈ ನಿಯಮಗಳನ್ನು ಪಾಲಿಸಿ, ಗ್ರಹಣದ ಬಗ್ಗೆ ಕುತೂಹಲ ಇರುವವರು ನಬೋಮಂದಲದಲ್ಲಿ ನಡೆಯುವ ವಿಸ್ಮಯವನ್ನು ಯಾವುದೇ ಭಯವಿಲ್ಲದೆ ನೋಡಿ ಕಣ್ತುಂಭಿಕೊಳ್ಳಬಹುದು.
YOU MAY ALSO LIKE

No comments