ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ - News Desk

Thursday, July 5, 2018

ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ

Farmer

ಕುಮಾರಸ್ವಾಮಿಯವರು ಇಂದಿನ ತಮ್ಮ ಸರಕಾರದ ಬಜೆಟ್ ನಲ್ಲಿ ರೈತರ ಸಾಲವನ್ನು ಮನ್ನಾ ಮಾಡುವ ಘೋಷಣೆಯನ್ನು ಮಾಡಿದ್ದಾರೆ. ಇದರೊಂದಿಗೆ ಸಂಪೂರ್ಣ ಸಾಲಮನ್ನ ಮಾಡುವ ಯೋಜನೆಯನ್ನು ಕೈಬಿಟ್ಟು,ಕೇವಲ 2 ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಆಗಲಿದೆ. ಯಾವ ಅವಧಿಯ, ಯಾವ ರೀತಿಯ ಮತ್ತು ಯಾವ ರೈತರ ಸಾಲಗಳು ಮನ್ನಾ ಆಗಲಿವೆ ಎನ್ನುವ ಬಗ್ಗೆ ಮಾಹಿತಿಯನ್ನು ತಿಳಿಸುವ ಸಣ್ಣ ಪ್ರಯತ್ನ ಇದಾಗಿದೆ.

1. ರಾಷ್ಟ್ರೀಕೃತ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಖಾಸಗಿ ಮತ್ತು ಸಹಕಾರಿ ಕ್ರೆಡಿಟ್ ಸೊಸೈಟಿಗಳು,        ರೈತರ ಸಹಕಾರ ಸೇವಾ ಕೇಂದ್ರ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಗಳಿಂದ ಪಡೆದ ಸಾಲಗಳು ಮನ್ನಾ ಆಗಲಿವೆ.
2. ಕೃಷಿ ಸಾಲ ಅಥವಾ ಕಿಸಾನ್ ಕ್ರೆಡಿಟ್ ಸಾಲ ಮರುಪಾವತಿ ಮಾಡಿದವರಿಗೆ 25,000 ರೂ. ಬಹುಮಾನದ ರೂಪದಲ್ಲಿ ನೀಡಲಾಗುವುದು. ಮರುಪಾವತಿ ಮಾಡಿದ ಸಲವೂ 25,000 ಕ್ಕಿಂತ ಕಡಿಮೆ ಇದ್ದರೆ ಅಷ್ಟನ್ನೇ ವಾಪಾಸ್ ನೀಡಲಾಗುವುದು.
3. ಬೆಳೆಸಾಲ, ಮರುವರ್ಗೀಕರಣ ಆದ ಬೆಳೆಸಾಲ ಮತ್ತು ಒಂದು ವರ್ಷ ಮೀರದ ಸಾಲಗಳು ಮನ್ನಾ ಆಗಲಿವೆ.
4. ಸಹಕಾರಿ ಸಂಘಗಳಲ್ಲಿ ಸಾಲಮನ್ನಾ ಪ್ರಯೋಜನ ಪಡೆದ ರೈತರಿಗೆ ಈಗ ಮತ್ತೆ ಸಾಲಮನ್ನಾ ಅಭಿಸುವುದಿಲ್ಲ.
5. 1 ಎಪ್ರಿಲ್ 2009ರ ನಂತರ ಪಡೆದ ಬೆಳೆಸಾಲ ಮತ್ತು 30 ಡಿಸೆಂಬರ್  2017ರ ವೇಳೆಗೆ ಬಾಕಿ ಇರುವ ಸಾಲಗಳು ಮಾತ್ರ ಮನ್ನಾ ಆಗಲಿವೆ.
Kumarasvami

6. ಈ ಯೋಜನೆಯಲ್ಲಿ ರೈತರ ಕುಟುಂಬದ 2 ಲಕ್ಷದ ವರೆಗಿನ ಸುಸ್ತಿ ಸಾಲವನ್ನು ಮನ್ನಾ ಮಾಡಲಾಗುತ್ತದೆ. ರೈತನ ಕುಟುಂಬ ಎಂದರೆ ರೈತ, ಆತನ ಪತ್ನಿ ಮತ್ತು ಮಗ.
7. ಒಂದೇ ಕುಟುಂಬದ ಎರಡು ಜನರ ಹೆಸರಿನಲ್ಲಿರುವ ಸಾಲಗಳು ಮನ್ನಾ ಆಗುವುದಿಲ್ಲಾ. (ಅಂದರೆ ಕೇವಲ ಒಬ್ಬರ ಹೆಸರಿನಲ್ಲಿರುವ 2 ಲಕ್ಷ ಮಾತ್ರ ಮನ್ನಾ ಆಗಲಿದೆ.)
8. ಬೆಳೆ ಸಾಲ ಎಂದರೆ ಒಂದು ವರ್ಷದಲ್ಲಿ ತಿರಿಸಬಹುದಾದ ಮತ್ತು ಕೃಷಿ ಬಳಕೆಗೆ ತೆಗೆದುಕೊಂಡ ಸಾಲವಾಗಿರುತ್ತದೆ. ಇದು ಪ್ಲಾಂಟೆಶನ್, ತೋಟಗಾರಿಕೆಗೆ ಪಡೆದ ಸಾಲಗಳೂ ಸೇರಿವೆ.

ಈ ನಿಯಮಗಳು ಅನ್ವಯವಾಗುವ ರೈತರಿಗೆ ಕುಮಾರಸ್ವಾಮಿಯವರು ನೀಡಿದ ಬೆಳೆ ಸಾಲಮನ್ನಾ ಯೋಜನೆಯು ಲಭಿಸಲಿದ್ದು, ಕೆಲವು ರೈತರಿಗೆ ಸ್ವಲ್ಪ ಮಟ್ಟಿನ ಹೊರೆ ಕಡಿಮೆಯಾಗುವ ನಿರೀಕ್ಷೆಯು ಕಂಡು ಬರುತ್ತಿದೆ.

                                                         YOU MAY ALSO LIKE

No comments:

Post a Comment