Breaking News

ಅಯೋಧ್ಯೆ ತೀರ್ಪು ವಿಳಂಬವಾದರೆ ಹೋರಾಟ : ವಿಹಿಂಪ ಕಾರ್ಯಾಧ್ಯಕ್ಷ

Ram_Janmabhumi

ವರ್ಷಾಂತ್ಯದೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಆರಂಭಿಸಲು ಸಾಧ್ಯವಾಗುವಂತೆ ಸುಪ್ರೀಂ ಕೋರ್ಟ್‌ ರಾಮ ಜನ್ಮಭೂಮಿ ವಿವಾದವನ್ನು ಬೇಗನೆ ಬಗೆಹರಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಕಾರ್ಯಾಧ್ಯಕ್ಷ ಆಲೋಕ್‌ ಕುಮಾರ್‌ ಆಗ್ರಹಿಸಿದ್ದಾರೆ. ಒಂದೊಮ್ಮೆ ಸುಪ್ರೀಂ ಕೋರ್ಟ್‌ ತೀರ್ಪು ವಿಳಂಬಿಸಿದರೆ ನಾವು ತೀವ್ರವಾದ ಹೋರಾಟವನ್ನು  ಮಾಡಬೇಕಾಗುತ್ತದೆ ಎಂದವರು ಹೇಳಿದ್ದಾರ. 


ರಾಮ ಮಂದಿರ ಮಾತ್ರವಲ್ಲದೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಆಲೋಕ್‌ ಕುಮಾರ್‌ ಅವರು ವಿಶ್ವ ಹಿಂದೂ ಪರಿಷತ್‌ಗೆ  ಸಿಐಎ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಲು ಮುಂದಾಗಿರುವ ವಿಷಯವನ್ನೂ ಚರ್ಚಿಸಿದರು. 
ಅಯೋಧ್ಯೆಯ ವಿವಾದಿತ ತಾಣವು ಶ್ರೀ ರಾಮಚಂದ್ರನಿಗೆ ಸೇರಿದ್ದೆಂದು ಸುಪ್ರೀಂ ಕೋರ್ಟ್‌ ತೀರ್ಪು ಕೊಟ್ಟಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸುವುದು ಸುಲಭವಾಗುವುದು ಎಂದವರು ಹೇಳಿದರು.

                                                         YOU MAY ALSO LIKE

No comments