ಚಲಿಸುತ್ತಿದ್ದ ಬೈಕ್ ಮೇಲೆ ಮರ ಉರುಳಿ ಇಬ್ಬರು ದುರ್ಮರಣ - News Desk

Sunday, July 15, 2018

ಚಲಿಸುತ್ತಿದ್ದ ಬೈಕ್ ಮೇಲೆ ಮರ ಉರುಳಿ ಇಬ್ಬರು ದುರ್ಮರಣಯಲ್ಲಾಪುರ: ಚಲಿಸುತ್ತಿದ್ದ ಬೈಕ್ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63   ಬಿರಗದ್ದೆ  ಕ್ರಾಸ್ ಬಳಿ ಶನಿವಾರ ಸಂಭವಿಸಿದೆ.

ಅಂಕೋಲಾ ತಾಲೂಕಿನ ಕನಕನಹಳ್ಳಿ ಗ್ರಾಮದ ಸುಭಾಶ್ ಚಿಪ್ಕರ್(೫೦) ಹಾಗೂ ನಾಗರಾಜ್ ಸಲಗಾವ್ಕರ್(೨೫) ಮೃತಪಟ್ಟವರು ಎಂದು ತಿಳಿದು ಬಂದಿದೆ. ಯಲ್ಲಾಪುರದಿಂದ ಅಂಕೋಲಾ ಕಡೆಗೆ ಬೈಕ್ ನಲ್ಲಿ ತೆರಳುವಾಗ ಮರ ಬೈಕ್ ಮೇಲೆ ಬಿದ್ದಿದೆ. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಿಡದೆ ಗಾಳಿ ಮಳೆಯಾಗುತ್ತಿದ್ದು ಶನಿವಾರವೂ ಮಳೆಗಾಳಿಯ ಆರ್ಭಟ ಜೋರಾಗಿತ್ತು. ಗಾಳಿ ಮಳೆಯಿಂದ ಮರ ಬಿದ್ದು   ದುರ್ಘಟನೆ ಸಂಭವಿಸಿದೆ.


                                                         YOU MAY ALSO LIKE

No comments:

Post a Comment