2020ರ ಟೋಕಿಯೋ ಒಲಿಂಪಿಕ್ಸ್ ಅಧಿಕೃತ ಲಾಂಛನ ಅನಾವರಣ - News Desk

Monday, July 23, 2018

2020ರ ಟೋಕಿಯೋ ಒಲಿಂಪಿಕ್ಸ್ ಅಧಿಕೃತ ಲಾಂಛನ ಅನಾವರಣ


2020ರ ಟೋಕಿಯೋ ಒಲಿಂಪಿಕ್ಸ್ ಲಾಂಛನವನ್ನು, ಕ್ರೀಡಾಕೂಟದ ಆಯೋಜಕರು ಭಾನುವಾರ ಬಿಡುಗಡೆಗೊಳಿಸಿದರು. ಇದೇ ವೇಳೆ ಪ್ಯಾರಾಲಿಂಪಿಕ್ ಲಾಂಛನವನ್ನೂ ಲೋಕಾರ್ಪಣೆ ಮಾಡಲಾಯಿತು.
ಟೋಕಿಯೋ ಒಲಿಂಪಿಕ್ಸ್‌ನ ಲಾಂಛನವನ್ನು ನೀಲಿವರ್ಣದಿಂದ ರೂಪಿಸಲಾಗಿದ್ದು, ಇದಕ್ಕೆ 'ಮಿರೈಟೊವಾ' ಎಂದು ಹೆಸರಿಡಲಾಗಿದೆ. ಜಪಾನ್‌ನ ಭವಿಷ್ಯವನ್ನು ಪ್ರತಿಬಿಂಬಸಲಿದೆ ಹಾಗೂ ಭವಿಷ್ಯದ ಭರವಸೆಯ ಸಂಕೇತವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಇನ್ನು ಪಿಂಕ್ ವರ್ಣಮಯವಾಗಿರುವ ಪ್ಯಾರಾಲಿಂಪಿಕ್ ಲಾಂಛನಕ್ಕೆ 'ಸಮೇಟಿ' ಎಂದು ನಾಮಕಾರಣ ಮಾಡಲಾಗಿದೆ.

ಜಪಾನ್‌ನ ಪ್ರತಿಬಿಂಬವಾದ ಚೆರ್ರಿ ಮರಗಳು ಹಾಗೂ ಇಂಗ್ಲಿಷ್‌ನ 'ಸೋ ಮೈಟ್' (ಬಹಳ ಪ್ರಬಲ) ಎಂಬ ಪದಗಳಿಂದ ಪ್ರೇರಣೆಗೊಂಡು ಈ ಹೆಸರಿಡಲಾಗಿದೆ. ಜಪಾನ್‌ನ ಸಂಪ್ರದಾಯ ಹಾಗೂ ನಾವೀನ್ಯತೆಯ ಸಂಕೇತ ಇದಾಗಿದೆ ಎಂದು ಕ್ರೀಡಾಕೂಟದ ಆಯೋಜಕರು ಪ್ಯಾರಾಲಿಂಪಿಕ್ ಲಾಂಛನ ಕುರಿತು ವಿವರಣೆ ನೀಡಿದ್ದಾರೆ. ಇದರಲ್ಲಿ 'ಮಿರೈಟೊವಾ' ನ್ಯಾಯದ ಪ್ರತಿರೂಪವಾಗಿದೆ. ಎಲ್ಲಿಗಾದರೂ ಚಲಿಸಬಲ್ಲ ಮಾಂತ್ರಿಕಶಕ್ತಿಯನ್ನು ಇದು ಹೊಂದಿದೆ. ಇನ್ನು 'ಸಮೇಟಿ' ಸಾಮಾನ್ಯವಾಗಿ ಶಾಂತಚಿತ್ತವಾಗಿರುತ್ತದೆ.

ಆದರೆ, ಅಗತ್ಯಬಿದ್ದಾಗ ತನ್ನಲ್ಲಿರುವ ಅಗಾಧಶಕ್ತಿ ಯನ್ನು ಹೊರಹಾಕುತ್ತದೆ ಎಂದು ಲಾಂಛನಗಳ ಕುರಿತಾದ ಕಥೆಗಳನ್ನು ಆಯೋಜಕರು ತಿಳಿಸಿದರು.


YOU MAY ALSO LIKE

No comments:

Post a Comment