Breaking News

ಮೋದಿಗೆ 5 ವರ್ಷ ಸಾಕಾಗಲ್ಲಾ : ನಟಿ ಕಂಗನಾ

Kangana-ranaut-Modi

ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವದ ನಿಜವಾದ ನಾಯಕ ಎಂದು ಮಾದ್ಯಮಗಳ ಜೊತೆ ಮಾತನಾಡಿದ ಬಾಲಿವುಡ್ ಬೆಡಗಿ ಕಂಗನಾ ರಣಾವತ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ "ಚಲೋ ಜೀತ್ ಹೈ"ಕಿರುಚಿತ್ರ ಪ್ರದರ್ಶನ ವೀಕ್ಷಣೆಯ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಕಂಗನಾ, " ನರೇಂದ್ರ ಮೋದಿ ದೇಶದ ಅತ್ಯಂತ ಸಮರ್ಥ ಪ್ರಧಾನಿ, ಅವರು ಈ ಸ್ಥಾನಕ್ಕೇರಲು ತಂದೆ ಅಥವಾ ತಾಯಿಯ ಹೆಸರನ್ನು ಬಳಸಿಕೊಂಡು ಬಂದಿಲ್ಲ. ನಾವೆಲ್ಲಾ ಸೇರಿ ಅವರನ್ನು ಆಯ್ಕೆ ಮಾಡಿದ್ದೇವೆ. ಅವರು ನಿಜವಾದ ಪ್ರಜಾಪ್ರಭುತ್ವದ ನಾಯಕ. ಕಠಿಣ ಪರಿಶ್ರಮ ಮತ್ತು ಸಾಧನೆಯ ನಂತರ ಅವರು ಯೋಗ್ಯ ಸ್ಥಾನವನ್ನು ಪಡೆದಿದ್ದಾರೆ" ಎಂದು ಹೇಳಿದರು. 

ನರೇಂದ್ರ ಮೋದಿಯವರ ಸರಕಾರ 2019 ರಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, "ದೇಶದಲ್ಲಿರುವ ಸಮಸ್ಯೆಗಳನ್ನು ನಿವಾರಿಸಲು ಕೇವಲ 5 ವರ್ಷ ಸಾಕಾಗುವುದಿಲ್ಲ. 2019 ರಲ್ಲಿಯೂ ಅಧಿಕಾರಕ್ಕೆ ಬರುವುದು ಅಗತ್ಯವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿರಿ :  ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಾಂಕಾ ಚೋಪ್ರಾ...!
YOU MAY ALSO LIKE

No comments