Breaking News

ವಿಶ್ವದ ಆರನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ದೇಶ ಎಂಬ ಹೆಗ್ಗಳಿಕೆ ಪಡೆದ ಭಾರತ


ವಿಶ್ವ ಬ್ಯಾಂಕಿನ ಅಂಕಿ ಅಂಶಗಳ ಪ್ರಕಾರ ಭಾರತವು ವಿಶ್ವದ ಆರನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ ಆರ್ಥಿಕತೆಯು ಹಲವು ತಿಂಗಳು ಕುಂಠಿತ ಕಂಡಿದ್ದು, 2017 ರ ಜುಲೈ ನಂತರ ಚೇತರಿಕೆ ಕಂಡಿದೆ. ಈ ಕಾರಣದಿಂದಾಗಿ ಸಾಧನೆಯನ್ನು ಮಾಡಲು ಸಾಧ್ಯವಾಯಿತು.

ವಿಶ್ವದ ಆರನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ದೇಶ ಎಂಬ ಹೆಗ್ಗಳಿ ಕೆಪಡೆಯುವ ಜೊತೆಗೆ ಪ್ರಾನ್ಸ್ ದೇಶವನ್ನು ಹಿಂದೆ ಹಾಕಿದೆ.  2017 ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಯು 2.597 ಟ್ರಿಲಿಯನ್ ಡಾಲರ್ ನಷ್ಟು ಇದ್ದು, 2.582 ಟ್ರಿಲಿಯನ್ ಡಾಲರ್ ಹೊಂದಿರುವ ಫ್ರಾನ್ಸ್ ನ್ನು ಹಿಂದಿಕ್ಕಿ ಆರನೇ ಸ್ಥಾನ ಗಿಟ್ಟಿಸಿಕೊಂಡಿದೆ. ಯು ಎಸ್ ಪ್ರಥಮ ಸ್ಥಾನ ಪಡೆದಿದ್ದರೆ ಚೀನಾ, ಜಪಾನ್ ಮತ್ತು ಜರ್ಮನಿ ನಂತರದ ಸ್ಥಾನದಲ್ಲಿದೆ. ಇದೆ ರೀತಿಯಲ್ಲಿ ಮುಂದುವರೆದರೆ 2018 ರಲ್ಲಿ ಭಾರತದ ಜಿಡಿಪಿ ಶೇ.  7.4 ರಷ್ಟುಏರಿಕೆ ಕಾಣಲಿದ್ದು,   2019 ರಲ್ಲಿ  ಜಿಡಿಪಿ ಶೇ. 7.8 ಕ್ಕೆ ಏರಲಿದೆ ಎಂದು ತಿಳಿಸಿದೆ.


                                                         YOU MAY ALSO LIKE

No comments