Breaking News

ಭಾರತ-ಇಂಗ್ಲೆಂಡ್ ಏಕದಿನ: ಐತಿಹಾಸಿಕ ದಾಖಲೆಗೆ ಸಜ್ಜಾದ ಎಂ ಎಸ್ ಧೋನಿ

ಎಂ ಎಸ್ ಧೋನಿ

ಇಂಗ್ಲೆಂಡ್ ವಿರುದ್ದ  ಟಿ -20 ಸರಣಿಯನ್ನು ಗೆದ್ದು, ಇದೀಗ ಏಕದಿನ ಸರಣಿಯನ್ನು ಗೆಲ್ಲಲು ಕೊಹ್ಲಿ ಪಡೆ ತಯಾರಿಯನ್ನು ನಡೆಸಿದೆ.ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯಾವಳಿಯು ನಾಳೆಯಿಂದ (ಜು.12) ಪ್ರಾರಂಭವಾಗಲಿದ್ದು, ಈ ಪಂದ್ಯದಲ್ಲಿಯೇ ಎಂ ಎಸ್ ಧೋನಿಯವರು ಐತಿಹಾಸಿಕ ದಾಕಲೆ ಬರೆಯಲು ತಯಾರಿಯನ್ನು ನಡೆಸಿದ್ದಾರೆ.

ಎಂ ಎಸ್ ಧೋನಿ ಏಕದಿನ ಕ್ರಿಕೆಟ್ ನಲ್ಲಿ 318 ಪಂದ್ಯಗಳಿಂದ 9967 ರನ್ ಗಳಿಸಿದ್ದಾರೆ. ಇದೀಗ 33 ರನ್ ಗಳಿಸಿ ಈ ಪಂದ್ಯದಲ್ಲಿಯೇ 10,000 ರನ್ ಧಾಖಲಿಸಿ ಸಾದನೆ ಮಾಡುವ ಸಾದ್ಯತೆ ಇದೆ.ಈ ಸಾಧನೆಯ ಮೂಲಕ 10 ಸಾವಿರ ರನ್ ಸಿಡಿಸಿದ ದಿಗ್ಗಜ ಬ್ಯಾಟ್ಸ್ ಮ್ಯಾನ್ ಗಳ ಸಾಲಿಗೆ ದೋನಿಯು ಸೇರಲಿದ್ದಾರೆ. 10 ಸಾವಿರ ರನ್ ಸಿಡಿಸಿ ಸಾದನೆ ಮಾಡಿದರೆ, ಏಕದಿನ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ 12 ನೇ ಕ್ರಿಕೆಟಿಗ ಹಾಗೂ ವಿಶ್ವದ 2 ನೇ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಮೊದಲ ಪಂದ್ಯದಲ್ಲಿಯೇ ಈ ಸಾಧನೆ ಮಾಡಲಿ ಎಂಬುದು ಎಲ್ಲ ಅಭಿಮಾನಿಗಳ ಹಾರೈಕೆಯಾಗಿದೆ.                                                           YOU MAY ALSO LIKE

No comments