ಇಂಗ್ಲೆಂಡ್ ವಿರುದ್ದ ಭಾರತಕ್ಕೆ ಗೆಲುವು - News Desk

Sunday, July 8, 2018

ಇಂಗ್ಲೆಂಡ್ ವಿರುದ್ದ ಭಾರತಕ್ಕೆ ಗೆಲುವು

Indian_cricket

ಇಂದು ನಡೆದ ಟಿ-20 ಪಂದ್ಯಾವಳಿಯಲ್ಲಿ ಇಂಗ್ಲಂಡನ ವಿರುದ್ದ ಭರ್ಜರಿ ಜಯಗಳಿಸುವ ಮೂಲಕ ಭಾರತ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿತು.

ಟಾಸ್ ಗೆದ್ದು ಪಿಲ್ದಿಂಗನ್ನು ಆಯ್ಕೆಮಾಡಿಕೊಂಡ ಕೊಹ್ಲಿ ಪಡೆ ಮೊದಲು ಬ್ಯಾಟಿಂಗನ್ನು ಇಂಗ್ಲೆಂಡಿಗೆ ಬಿಟ್ಟು ಕೊಟ್ಟಿತು. ಉತ್ತಮ ಆರಂಭವನ್ನು ಮಾಡಿದ ಇಂಗ್ಲೆಂಡ್ ಭಾರತದ ಸಂಗಟಿತ ಪ್ರಯತ್ನಕ್ಕೆ ಸೋಲೊಪ್ಪಿಕೊಂಡಿತು. 20 ಓವರ್ ನ ಕೊನೆಯಲ್ಲಿ 9 ವಿಕೆಟ್ ಕಳೆದುಕೊಂಡು 198 ರನ್ ಮಾತ್ರ ಗಳಿಸಲು ಶಕ್ತವಾಯಿತು.

198 ರನ್ ನ ಗುರಿಯನ್ನು ಬೆನ್ನತ್ತಿದ ಭಾರತ ರೋಹಿತ್ ಶರ್ಮರ ಉತ್ತಮ ಬ್ಯಾಟಿಂಗ್ ನಿಂದ ಮುಂದೆ ಸಾಗಿತು. ಆರಂಭದಲ್ಲಿ ಶಿಕರ ಧವನ್ ವಿಕೆಟ್ ಕಳೆದುಕೊಂಡು ಚಿಂತೆಯಲ್ಲಿದ್ದ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಹರ್ಧಿಕ್ ಪಾಂಡ್ಯರ ನೆರವು ಲಭಿಸಿತು. ಅಂತಿಮವಾಗಿ ಭಾರತ 3 ವಿಕೆಟ್ ನಷ್ಟಕ್ಕೆ 201ರನ್ ಗಳಿಸಲು ಶಕ್ಯವಾಯಿತು.

ಭಾರತದ ಮಾರಕ ಬೌಲಿಂಗ್ ಧಾಳಿಗೆ ಇಂಗ್ಲಂಡ ತಂಡ ತಲೆತಗ್ಗಿಸುವಂತೆ ಮಾಡಿತು. ಹರ್ಧಿಕ್ ಪಾಂಡ್ಯ 4 , ಸಿದ್ದಾರ್ಥ್ ಕೌಲ್ 2  ಹಾಗೂ ದೀಪಕ್ ಮತ್ತು ಉಮೇಶ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು. ಇಂಗ್ಲೆಂಡ್ ಪರವಾಗಿ ಡೇವಿಡ್ ವಿಲ್ಲೆ, ಜಾಕ್ ಬಾಲ್ ಮತ್ತು ಚಾರ್ಲ್ಸ್ ಜೋರ್ಡನ್  ತಲಾ ಒಂದೊಂದು ವಿಕೆಟ್ ಪಡೆದುಕೊಂಡರು. ಅಂತಿಮವಾಗಿ ಭಾರತ ಮತ್ತು ಇಂಗ್ಲೆಂಡ್ ಟಿ-20 ಪಂದ್ಯಾವಳಿಯು 2-1 ರಿಂದ ಭಾರತದ ಪಾಲಾದಂತಾಯಿತು.
ಇದನ್ನೂ ಓದಿರಿ : ಜು. 9 ರಂದು ದ.ಕ. ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ


                                                         YOU MAY ALSO LIKE

No comments:

Post a Comment