ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ಹಿಮಾ
![]() |
ಹಿಮಾದಾಸ್ ಸ್ಪರ್ಧೆಯಲ್ಲಿ ಕ್ಷಣ |
ಫಿನ್ಲೆಂಡ್ ನ ತಂಪೆರಾದಲ್ಲಿ ನಡೆಯುತ್ತಿರುವ ಐ ಎ ಎಫ್ ಅಂಡರ್ 20 ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಹಿಮಾದಾಸ್ ಚಿನ್ನಗೆದ್ದು ದಾಖಲೆ ನಿರ್ಮಿಸಿದ್ದಾರೆ. 51.46 ಸೆಕೆಂಡುಗಳಲ್ಲಿ 400 ಮೀ. ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಹಿಮಾ, ಈ ಸ್ಪರ್ದೆಯಲ್ಲಿ ಚಿನ್ನಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಅಸ್ಸಾಂ ರಾಜ್ಯದ ನಾಗೋರ್ ಜಿಲ್ಲೆಯ ದಿಂಗ್ ಗ್ರಾಮದ ಸಾದಾರಣ ರೈತ ಕುಟುಂಬದವರಾದ ಇವರು ಈ ಮೊದಲು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮೀ.ಪೈನಲ್ ಓಟದಲ್ಲಿ 6 ನೇ ಮತ್ತು ಗುವಾಹಟಿಯಲ್ಲಿ ನಡೆದ ಅಂತರಾಜ್ಯ ಚಾಂಪಿಯನ್ ಶಿಪ್ ನಲ್ಲಿ ಚಿನ್ನವನ್ನು ಗೆದ್ದಿದ್ದರು.
ತಂಪೆರಾದಲ್ಲಿ ಚಿನ್ನ ಗೆದ್ದ ನಂತರ ಮಾತನಾಡಿ, "ವಿಶ್ವ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಗೆದ್ದಿರುವುದು ಖುಷಿ ತಂದಿದೆ. ಸ್ಪರ್ದೆಯ ವೇಳೆ ನನಗೆ ಪ್ರೋತ್ಸಾಹ ನೀಡಿದ ಎಲ್ಲ ಭಾರತೀಯರಿಗೂ ನನ್ನ ಧನ್ಯವಾದಗಳು. ಈ ರೀತಿಯ ಬೆಂಬಲ ನಮಗೆ ಹೆಚ್ಚಿನ ಹುರುಪನ್ನು ತುಂಬುತ್ತದೆ" ಎಂದು ಹೇಳಿದರು.
ಭಾರತಕ್ಕೆ ಐತಿಹಾಸಿಕ ಗೆಲುವನ್ನು ತಂದುಕೊಟ್ಟ ಹಿಮಾ ಅವರಿಗೆ ದೇಶದಾದ್ಯಂತ ಅನೇಕ ಗಣ್ಯರಿಂದ ಮತ್ತು ಜನಸಾಮಾನ್ಯರಿಂದಲೂ ಅಭಿನಂದನೆಯ ಮಹಾ ಪೂರವೇ ಹರಿದು ಬರುತ್ತಿದೆ. ಅದರಲ್ಲಿ ಮುಖ್ಯವಾಗಿ ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್ ಟ್ವೀಟ್ ಮಾಡಿ ," ಇಪ್ಪತ್ತು ವರ್ಷದೊಳಗಿನ ಅಥ್ಲೆಟಿಕ್ ಚಾಂಪಿಯನ್ ಶಿಪ್ ನ 400 ಮೀ. ಓಟದಲ್ಲಿ ಪದಕ ಗೆದ್ದ ನಮ್ಮ ಸೆನ್ಸೇಷನಲ್ ಸ್ಪಿರಿಟ್ ಹಿಮಾದಾಸ್ ಅವರಿಗೆ ಅಭಿನಂದನೆಗಳು.ಇದು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಟ್ರಾಕ್ ವಿಭಾಗದ ಮೊಟ್ಟ ಮೊದಲ ಚಿನ್ನವಾಗಿದೆ. ಅಸ್ಸಾಂ ಮತ್ತು ಭಾರತ ಹೆಮ್ಮೆ ಪಡುವ ಸಂಗತಿಯಾಗಿದ್ದು, ಈಗ ಹಿಮಾ ಒಲಪಿಕ್ ವಿಭಾಗದ ಆಕರ್ಷಣೆಯಾಗಿದಾರೆ" ಅಭಿನಂದಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು, " ವಿಶ್ವ ಯು-20 ಚಾಂಪಿಯನ್ ಶಿಪ್ ನಲ್ಲಿ 400 ಮೀ.ನಲ್ಲಿ ಐತಿಹಾಸಿಕ ಚಿನ್ನವನ್ನು ಗೆದ್ದ ಹಿಮಾದಾಸ್ ಅವರಿಂದ ಭಾರತವು ಹೆಮ್ಮೆಯಿಂದ ಸಂತಸ ಪಟ್ಟಿದೆ. ಹಿಮಾದಾಸ್ ಅವರ ಸಾದನೆಯು ಮುಂದಿನ ವರ್ಷಗಳಲ್ಲಿ ಯುವ ಕ್ರೀಡಾಪಟುಗಳಿಗೆ ಸ್ಪೂರ್ಥಿ ನೀಡಲಿದೆ. ಹಿಮಾದಾಸ್ ಅವರಿಗೆ ಅಭಿನಂದನೆಗಳು" ಎಂದು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.
ಈ ಸ್ಪರ್ದೆಯಲ್ಲಿ ರೊಮೇನಿಯಾದ ಆಂಡ್ರಿಯಾ ಮಿಕ್ಲಾಸ್ ದ್ವಿತೀಯ ಸ್ಥಾನವನ್ನು ಮತ್ತು ಅಮೇರಿಕಾದ ಟೇಲರ್ ಮಾನ್ಸನ್ ತ್ರತೀಯ ಸ್ಥಾನವನ್ನು ಪಡೆದರು. ಬಡ ರೈತ ಕುಟುಂಬದಲ್ಲಿ ಹುಟ್ಟಿ ಕಷ್ಟದಿಂದ ಅಬ್ಯಸಿಸಿ ಮೊಟ್ಟ ಮೊದಲ ಬಾರಿಗೆ ಚಿನ್ನದ ಪದಕವನ್ನು ಗೆದ್ದು ಕೊಟ್ಟ ಹಿಮಾ ದಾಸ್ ಅವರಿಗೆ ಇಡೀ ದೇಶವೇ ಅಭಿನಂದನೆ ಸಲ್ಲಿಸುತ್ತಿದೆ.
YOU MAY ALSO LIKE
No comments