ಆನ್‌ಲೈನ್ ನಲ್ಲೇ ಆಧಾರ್-ಆಧರಿತ ತ್ವರಿತ ಪಾನ್ ಕಾರ್ಡ್ ಪಡೆಯಿರಿ - News Desk

Sunday, July 1, 2018

ಆನ್‌ಲೈನ್ ನಲ್ಲೇ ಆಧಾರ್-ಆಧರಿತ ತ್ವರಿತ ಪಾನ್ ಕಾರ್ಡ್ ಪಡೆಯಿರಿ

Pan_aadhar

ಮೊದಲ ಬಾರಿಗೆ ಆಧಾರ್-ಆಧರಿತ ತ್ವರಿತ ಆನ್‌ಲೈನ್ ಪಾನ್ ಕಾರ್ಡ್ ವಿತರಣೆ ಸೇವೆ ಆರಂಭಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ''ಈ ಸೌಲಭ್ಯಕ್ಕೆ ಶುಲ್ಕವಿಲ್ಲ. ಸೀಮಿತ ಅವಧಿಯಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಿ ಈ ತ್ವರಿತ ಇ-ಪಾನ್ ಕಾರ್ಡ್ ವಿತರಿಸಲಾಗುವುದು'' ಎಂದು ಇಲಾಖೆ ತಿಳಿಸಿದೆ.

ತಮ್ಮ ಹಣಕಾಸಿನ ಹಾಗೂ ತೆರಿಗೆ ವಿಚಾರಕ್ಕೆ ಸಂಬಂಧಿಸಿ ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನೂತನ ಸೌಲಭ್ಯ ಆರಂಭಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ವ್ಯಕ್ತಿಯ ಆಧಾರ್ ನಂಬರ್‌ನೊಂದಿಗೆ ಜೋಡಣೆಯಾದ 'ಸಕ್ರಿಯ ಮೊಬೈಲ್ ನಂಬರ್' ಮೂಲಕ ಕಳುಹಿಸಲಾಗುವ ಒನ್ ಟೈಮ್ ಪಾಸ್‌ವರ್ಡ್ ಆಧಾರದಲ್ಲಿ ಈ ಪಾನ್ ಕಾರ್ಡ್ ಅನ್ನು ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ. 

ಈ ವ್ಯವಸ್ಥೆಯಲ್ಲಿ ನೀಡುವ ಹೊಸ ಪಾನ್ ಕಾರ್ಡ್‌ನಲ್ಲಿ ಆಧಾರ್ ಕಾರ್ಡ್‌ನಲ್ಲಿರುವಂತೆ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಹಾಗೂ ವಿಳಾಸ ಇರಲಿದೆ ಎಂದು ಅವರು ತಿಳಿಸಿದ್ದಾರೆ. ''ಈ ಇ-ಪಾನ್ ಸೌಲಭ್ಯ ಭಾರತೀಯ ನಿವಾಸಿಗಳಿಗೆ ಮಾತ್ರ. ಹಿಂದೂ ಅವಿಭಕ್ತ ಕುಟುಂಬ, ಸಂಸ್ಥೆ, ಟ್ರಸ್ಟ್ ಹಾಗೂ ಕಂಪೆನಿಗಳಿಗೆ ಅಲ್ಲ'' ಎಂದು ಅವರು ತಿಳಿಸಿದ್ದಾರೆ. ಅರ್ಜಿದಾರನಿಗೆ ಒಮ್ಮೆ ಆತನ ಎಲೆಕ್ಟ್ರಾನಿಕ್ ಆಧಾರ್-ಆಧರಿತ ಪರಿಶೀಲನಾ ವ್ಯವಸ್ಥೆ ಮೂಲಕ ಪಾನ್ ಕಾರ್ಡ್ ಅನ್ನು ಕೆಲವು ಸೆಕೆಂಡುಗಳಲ್ಲಿ ಕಳುಹಿಸಿದ ಬಳಿಕ, ಅಂಚೆ ಮೂಲಕ ಪಾನ್ ಕಾರ್ಡ್ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

                                                         YOU MAY ALSO LIKE


No comments:

Post a Comment