ಸಾಮಾನ್ಯ ಜನರಿಗೆ ಬಿಗ್ ರಿಲೀಫ್ 191 ವಸ್ತುಗಳಿಗೆ ಜಿಎಸ್ ಟಿ ಕಡಿತ - News Desk

Monday, July 23, 2018

ಸಾಮಾನ್ಯ ಜನರಿಗೆ ಬಿಗ್ ರಿಲೀಫ್ 191 ವಸ್ತುಗಳಿಗೆ ಜಿಎಸ್ ಟಿ ಕಡಿತ


ಶನಿವಾರವಷ್ಟೇ ಕೇಂದ್ರೀಯ ಜಿಎಸ್‌ಟಿ ಮಂಡಳಿ 80 ಕ್ಕೂ ಹೆಚ್ಚು ವಸ್ತುಗಳ ತೆರಿಗೆ ದರವನ್ನು ಕಡಿತ ಮಾಡಿತ್ತು. ಇದರೊಂದಿಗೆ ಕಳೆದ ಒಂದು ವರ್ಷದಲ್ಲಿ 191 ವಸ್ತುಗಳ ದರ ಕಡಿತಗೊಂಡಿದೆ. ಪರಿಣಾಮ ಗರಿಷ್ಠ ತೆರಿಗೆಯಾದ ಶೇ.28 ರ ಸ್ತರದಲ್ಲಿ ಇನ್ನು ಕೇವಲ 35 ವಸ್ತುಗಳು ಮಾತ್ರ ಉಳಿದು ಕೊಂಡಿದೆ.
2017 ರ ಜುಲೈ 1ರಂದು ಜಿಎಸ್‌ಟಿ ಜಾರಿಯಾದಾಗ ಶೇ.28 ರ ತೆರಿಗೆ ದರದ ಅಡಿ 226 ವಸ್ತುಗಳು ಇದ್ದವು. ಆದರೆ ಜನಾಗ್ರಹದ ಮೇರೆಗೆ ಹಂತ ಹಂತವಾಗಿ ಶೇ.28 ಜಿಎಸ್‌ಟಿ ದರದ ಅನ್ವಯತೆಯನ್ನು ಜಿಎಸ್‌ಟಿ (ಸರಕು ಹಾಗೂ ಸೇವಾ ತೆರಿಗೆ) ಮಂಡಳಿ ಕಡಿಮೆ ಮಾಡುತ್ತಿದ್ದು, ಜುಲೈ 21 ರಂದು ಹಲವು ವಸ್ತುಗಳನ್ನು ಗರಿಷ್ಠ ತೆರಿಗೆಯಿಂದ ಮುಕ್ತಿಗೊಳಿಸಿದೆ. ಈವರೆಗೆ 191 ವಸ್ತುಗಳನ್ನು ಗರಿಷ್ಠ ತೆರಿಗೆಯ ವ್ಯಾಪ್ತಿಯಿಂದ ಹೊರಗೆ ತರ ಲಾಗಿದ್ದು, ಇನ್ನು ಕೇವಲ 35 ವಸ್ತುಗಳು ಮಾತ್ರ ಗರಿಷ್ಠ ತೆರಿಗೆಯ ವ್ಯಾಪ್ತಿಗೆ ಒಳಪಡಲಿವೆ.
ಶೇ.28 ರ ತೆರಿಗೆ ದರದಲ್ಲಿ ಡಿಜಿಟಲ್ ಕ್ಯಾಮರಾ, ವಿಡಿಯೋ ರೆಕಾರ್ಡರ್ಸ್, ಪಾತ್ರೆ ತೊಳೆಯೋ ಯಂತ್ರ, ಸಿಮೆಂಟು, ಟೈರ್, ಮೋಟಾರು ವಾಹನಗಳು ಹಾಗೂ ಆಟೋಮೊಬೈಲ್ ವಸ್ತುಗಳು, ವಿಮಾನ, ಪಾನೀಯಗಳು, ಬೆಟ್ಟಿಂಗ್, ಸಿಗರೇಟು, ಪಾನ್ ಮಸಾಲಾ, ತಂಬಾಕು ಪ್ರಮುಖವಾಗಿವೆ.


YOU MAY ALSO LIKE

No comments:

Post a Comment