ಸರಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್ ಪಾಸ್ : ಸಿಎಂ
ಸರಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್ಪಾಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದಲ್ಲಿ ಸೋಮವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಸರಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್ಪಾಸ್ ನೀಡಲಾಗುತ್ತದೆ. ಖಾಸಗಿ ಶಾಲೆ ಮಕ್ಕಳು 50 ರಿಂದ 1 ಲಕ್ಷ ರು. ಶುಲ್ಕ ನೀಡಿ ಶಾಲೆಗೆ ಹೋಗುತ್ತಾರೆ. ಅವರಿಗೆ ಬಸ್ಚಾರ್ಜ್ ನೀಡುವುದು ಕಷ್ಟವಾಗುವುದಿಲ್ಲ ಎಂದು ಹೇಳಿದರು.
ಎಲ್ಲರಿಗೂ ಉಚಿತ ಬಸ್ಪಾಸ್ ನೀಡಲು ಸಾಧ್ಯವಿಲ್ಲ: ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ಪಾಸ್ ನೀಡುವಂತೆ ಹಲವು ದಿನಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸು ತ್ತಿದ್ದರು. ಆದರೆ ಸಿಎಂ ಕುಮಾರಸ್ವಾಮಿ ನಾನು ಚುನಾವಣೆಗೂ ಮುನ್ನ ಉಚಿತ ಬಸ್ಪಾಸ್ ನೀಡುವುದಾಗಿ ಹೇಳಿರಲಿಲ್ಲ ಎಂದಿದ್ದರು. ಇದೀಗ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ಪಾಸ್ ನೀಡಲಾಗುತ್ತದೆ ಎಂದಿದ್ದಾರೆ.
ಖಾಸಗಿ ಶಾಲಾ ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಡೊನೇಶನ್ ನೀಡಿ ಶಾಲೆ ಸೇರುತ್ತಾರೆ. ಅಂತವರಿಗೆ ದುಡ್ಡುಕೊಟ್ಟು ಬಸ್ನಲ್ಲಿ ಪ್ರಯಾಣಿಸುವುದು ಕಷ್ಟವಾಗುವುದಿಲ್ಲ. ಉಚಿತ ಬಸ್ಪಾಸ್ ಬೇಕಿದ್ದರೆ ಸರಕಾರಿ ಶಾಲೆಗಳಿಗೆ ಬನ್ನಿ ನಿಮಗೂ ಬಸ್ಪಾಸ್ ಕೊಡೋಣ ಎಂದರು. ನಾಳೆ ಸಭೆ ಕರೆದು ಈ ಕುರಿತು ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರುವುದಾಗಿ ತಿಳಿಸಿದರು.
YOU MAY ALSO LIKE
No comments