Breaking News

ಫ್ಲಿಪ್‌ಕಾರ್ಟ್ ಬಿಗ್ ಶಾಪಿಂಗ್ ಡೇ ಸೇಲ್ ಮೊಬೈಲ್ಗಳ ಬೆಲೆಯಲ್ಲಿ ಭಾರಿ ಕಡಿತ..!


ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ಎರಡೂ ಕೂಡ ಸ್ಪರ್ಧೆಯಲ್ಲಿ ಆಫರ್ ಗಳ ಸುರಿಮಳೆ ಇಟ್ಟು ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಒಂದು ವೇಳೆ ನೀವು ಇಂದು ಯಾವುದು ಬೆಸ್ಟ್ ಸ್ಮಾರ್ಟ್ ಫೋನ್ ಡೀಲ್ ಇದೆ ಎಂದು ಪ್ರಶ್ನಿಸುವುದೇ ಆದರೆ ನಾವು ಐಫೋನ್ ಎಸ್‌ಇ ಎಂದು ಹೇಳಬೇಕಾಗುತ್ತದೆ.

ಹೌದು ಫ್ಲಿಪ್ ಕಾರ್ಟ್ ನ ಬಿಗ್ ಶಾಪಿಂಗ್ ಡೇ ಸೇಲ್ ನಲ್ಲಿ ಐಫೋನ್ ಎಸ್‌ಇ ಭಾರೀ ರಿಯಾಯಿತಿಯಲ್ಲಿ ಲಭ್ಯವಾಗುತ್ತಿದೆ. 32 ಜಿಬಿಯ ಆಫಲ್ ನ ಅತ್ಯಂತ ಹೆಚ್ಚು ಪ್ರಸಿದ್ಧ ಫೋನ್ ಭಾರತದಲ್ಲಿ ಕೇವಲ 16,999 ರುಪಾಯಿಗೆ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಾಗುತ್ತಿದೆ. ಈ ಮೊದಲು ಅಂದರೆ ಈ ವರ್ಷದ ಆರಂಭದಲ್ಲಿ ಇದರ ಬೆಲೆಯನ್ನು 20,000 ಕ್ಕೆ ಗಮನಿಸಲಾಗಿತ್ತು. ಈಗ ಮತ್ತೆ ಪುನಃ ಅತ್ಯುತ್ತಮ ಬೆಲೆಯಲ್ಲಿ ಐಫೋನ್ ಎಸ್‌ಇ ಖರೀದಿಗೆ ಲಭ್ಯವಾಗುತ್ತಿದೆ.



ಅತ್ಯಂತ ಕಡಿಮೆ ಬೆಲೆಯೊಂದಕ್ಕೆ ಐಫೋನ್ ಎಸ್ ಇ ಖರೀದಿಸಬೇಕು ಎಂದು ನೀವೇನಾದರೂ ಇಚ್ಛಿಸುತ್ತಿದ್ದಾರೆ ಖಂಡಿತ ಐಫೋನ್ ಎಸ್‌ಇ ಈ ಬೆಲೆಗೆ ಸಿಗುತ್ತಿರುವುದರಿಂದಾಗಿ ಇದನ್ನೇ ಖರೀದಿಸಬಹುದು. ನಿಜಕ್ಕೂ ಹೇಳಬೇಕಂದರೆ ಐಫೋನ್ ಎಸ್‌ಇ ಯನ್ನು ಖರೀದಿಸುವುದರಲ್ಲಿ ಹಲವು ಲಾಭಗಳಿಗೆ ಅನ್ನೋದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಗೂಗಲ್ ಪಿಕ್ಸೆಲ್-2 ಸಹ ಉತ್ತಮ ಪೋನಾಗಿದ್ದು, ಐದು ಇಂಚು ಸ್ಕ್ರಿನ್ ಹೊಂದಿದ್ದು ಉತ್ತಮ ಡಿಸ್ಪ್ಲೇಯನ್ನು ಕಾಣಬಹುದಾಗಿದೆ. 70,000 ದ ಫೋನ್ ಈಗ ಕೇವಲ 42,999 ರೂ ಗಳಿಗೆ ಸಿಗಲಿದೆ. 4 GB ರೆಮ್ ಹೊಂದಿದೆ. 12.2 ಮೆಗಾ ಪಿಕ್ಸೆಲ್ ನ ಹಿಂದಿನ ಕೆಮರಾ ಮತ್ತು 8 ಮೆಗಾ ಪಿಕ್ಸೆಲ್ ನ ಮುಂದಿನ ಕೆಮರವನ್ನು ಹೊಂದಿದೆ. 




ಎಮ್ ಐ ಮ್ಯಾಕ್ಸ್ -2 ಒಂದು ಉತ್ತಮ ಸ್ಮಾರ್ಟ್ ಫೋನ್ ಗಳಲ್ಲಿ ಒಂದು. ಇದು ಇಲ್ಲಿಯವರೆಗೆ  37999 ರೂ ಗಳಿಗೆ ದೊರೆಯುತ್ತಿದ್ದು, ಈಗ ಪ್ಲಿಪ್ ಕಾರ್ಟ್ ನಲ್ಲಿ  ಬಿಗ್ ಶಾಪಿಂಗ್ ಡೇ ಅಪಾರ್ ಇರುವುದರಿಂದ ಕೇವಲ ರೂ.  24999 ಕ್ಕೆ ದೊರೆಯಲಿದೆ. ಇದು 6 ಜಿ ಬಿ ರೆಮ್ ಮತ್ತು 5.99 ಇಂಚ್ ಹೆಚ್.ಡಿ ಡಿಸ್ಪ್ಲೇಯ್ ಹೊಂದಿದೆ. ಈ ಫೋನಿನ ಎಕ್ಸಾಚೆಂಜ ನೊಂದಿಗೆ ಈ ಬೆಲೆಯಲ್ಲಿ ಫೋನ್ ದೊರೆಯಲಿದೆ. 



ಸ್ಯಾಂಸಂಗ್ ಎಸ್ 7 ಎಡ್ಜ್  ಸಹ 4 ಜಿಬಿ ರೆಮ್ ಮತ್ತು 32 ಜಿಬಿ ರೋಮ್  ಹೊಂದಿದ ಪ್ರಸಿದ್ಧ ಫೋನ್ ಗಳಲ್ಲಿ ಒಂದಾಗಿದೆ. ಇದು ಸಹ ಆಫರ್ ಹೊಂದಿದ್ದು, 29990 ರೂ ಗಳಿಗೆ ದೊರೆಯಲಿದೆ. 3200 ಎಂ ಎ ಹೆಚ್ ಬ್ಯಾಟರಿಯನ್ನು ಹೊಂದಿದ ಮತ್ತು 12 ಎಂಪಿ ಹಿಂದಿನ ಕೆಮರವನ್ನು ಹೊಂದಿದ ಉತ್ತಮ ಫೋನ್  ಆಗಿದೆ. 

ಪ್ಲಿಪ್ ಕಾರ್ಟ್ ನಲ್ಲಿ ಇನ್ನೂ ಹಲವಾರು ಫೋನ್ ಗಳ ಮೇಲೆ ಆಫರ್ ಇದ್ದು, ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ನಿಮಗೆ ಇಷ್ಟವಿದ್ದಲ್ಲಿ ಪ್ಲಿಪ್ ಕಾರ್ಟ್ ಈ ಶಾಪಿಂಗ್ ಡೇ ಸೆಲ್ ನಲ್ಲಿ  ಶಾಪಿಂಗ್ ಮಾಡಿ ಹಣವನ್ನು ಉಳಿತಾಯ ಮಾಡಬಹುದು.


YOU MAY ALSO LIKE


No comments