Breaking News

ರೈತರ ಸಾಲಮನ್ನಾಗೆ ಅಸ್ತುಎಂದ ಸಮನ್ವಯ ಸಮಿತಿ.

ಭಾನುವಾರ  ಸಮನ್ವಯ ಸಮೀತಿ ಅಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ  ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಹಾಗೂ ಸಹಕಾರಿ ಬ್ಯಾಂಕ್ಗಳಿಂದ ರೈತರು ಪಡೆದಿರುವ ಬೆಳೆ ಸಾಲ ಮನ್ನಾ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು
ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು 

ರಾಜ್ಯದ ರೈತರ ಸಾಲಮನ್ನಾ ವಿಷಯವಾಗಿ ಇದ್ದ ಎಲ್ಲ ಗೊಂದಲಗಳು ಅಂತ್ಯವಾದಂತಾಗಿದ್ದು, ಇದೆ 5 ರಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡಿಸಲಿರುವ ಬಜೆಟ್ ನಲ್ಲಿ ರೈತರ ಸಾಲಮನ್ನಾ ಕುರಿತು ಘೋಷಣೆ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಮನ್ವಯ ಸಮಿತಿಯ ಸಭೆಯಲ್ಲಿ ರೈತರ ಸಾಲಮನ್ನಾ ಕುರಿತಾದ ಸ್ಪಷ್ಟ ನಿರ್ಧಾರಕ್ಕೆ ಬರಲಾಯಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹಠಕ್ಕೆ ಕೊನೆಗೂ ಮಣಿದ ಕಾಂಗ್ರೆಸ್ ಆರ್ಥಿಕ ಹೊರೆಯಾಗದ ರೀತಿಯಲ್ಲಿ ಸಾಲಮನ್ನಾ ಮಾಡಲು ಒಪ್ಪಿಗೆಯನ್ನು ನೀಡಿದೆ. ರೈತರ ಸಾಲಮನ್ನಾ ಮಾಡಬೇಕೆಂದು ಪಟ್ಟು ಹಿಡಿದಿದ್ದ ಜೆಡಿಎಸ್ ಈ ವಿಚಾರದಲ್ಲಿ ಮೇಲುಗೈ ಸಾಧಿಸಿದಂತಾಗಿದೆ.

ಇವುಗಳನ್ನೂ  ಓದಿರಿ :- 

ಆನ್‌ಲೈನ್ ನಲ್ಲೇ ಆಧಾರ್-ಆಧರಿತ ತ್ವರಿತ ಪಾನ್ ಕಾರ್ಡ್ ಪಡೆಯಿರಿ.  


                                                         YOU MAY ALSO LIKE


No comments