Breaking News

ಭಾರತದ ಗೆಲುವಿಗೆ 269 ರನ್ ಗಳ ಟಾರ್ಗೆಟ್ ನೀಡಿದ ಇಂಗ್ಲೆಂಡ್


ಇಂಗ್ಲೆಂಡ್ ವಿರುದ್ದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ 269 ರನ್ ಗಳ ಟಾರ್ಗೆಟ್ ನ್ನು ಇಂಗ್ಲೆಂಡ್ ಪಿಕ್ಸ್ ಮಾಡಿದೆ. ಟಾಸ್ ಸೋತು ಬ್ಯಾಟಿಂಗನ್ನು ಪ್ರಾರಂಭಿಸಿದ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ ಕೊನೆಯ ಬೌಲ್ ಇರುವಾಗಲೇ ಆಲ್ ಔಟ್ ಆಯಿತು. 

ಉತ್ತಮವಾಗಿ ಆರಂಭವನ್ನು ಮಾಡಿದ ಇಂಗ್ಲೆಂಡ್ ಭಾರತದ ಬೌಲಿಂಗ್ ದಾಳಿಗೆ ನಲುಗಿ ಹೋಯಿತು. ಕುಲದೀಪ್ ಯಾದವ್ ಅವರ ಕರಾರುವಕ್ಕಾದ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ನಲುಗಿ ಆರು ವಿಕೆಟ್ ಗಳನ್ನು ಒಪ್ಪಿಸಿತು.ಹಾಗೆಯೆ ಉಮೇಶ ಯಾದವ್ 2 ಮತ್ತು ಯಜುವೆಂದ್ರ ಚೆಹಾಲ್ 1 ವಿಕೆಟ್ ಪಡೆದರು.

ಇಂಗ್ಲೆಂಡ ನ ಪರವಾಗಿ ಜೇಸನ್ ರಾಯ್ 38, ಜೋ ರೂಟ್ 3, ದೇವಿಡ್ ವಿಲೇ 1, ಜಾನಿ ಬೈರಿಸ್ಟೋ 38, ಆದಿಲ್ ರಶೀದ್ 22, ಮೋಯಿನ್ ಅಲಿ 24 ಹಾಗೂ ನಾಯಕ ಇಯಾನ್ ಮಾರ್ಗನ್ 19 ರನ್ ಸಿಡಿಸಿ ಔಟ್ ಆದರು. ಲಿಯಾಮ್ ಪ್ಲೆಂಕೆಟ 10 ರನ್ ಗಳಿಸಿ ರನೌಟ್ ಗೆ ಬಲಿಯಾದರು. ಇಂಗ್ಲೆಂಡ್ 49.5 ಓವರ್ ಗಳಲ್ಲಿ 268 ರನ್ ಗಳಿಸಿ ಆಲೌಟ್ ಆಯಿತು.
ಲೈವ್ ಸ್ಕೊರನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.                                                          YOU MAY ALSO LIKE


No comments