ಶೋಪಿಯಾನ ಜಿಲ್ಲೆಯಲ್ಲಿ 2 ಉಗ್ರರನ್ನು ಹೊಡೆದುರುಳಿಸಿದ ಸೇನೆ - News Desk

Tuesday, July 10, 2018

ಶೋಪಿಯಾನ ಜಿಲ್ಲೆಯಲ್ಲಿ 2 ಉಗ್ರರನ್ನು ಹೊಡೆದುರುಳಿಸಿದ ಸೇನೆ

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಭಾರತೀಯ ಸೇನೆಯು ಎನ್ ಕೌಂಟರ್ ನಡೆಸಿ, ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. 
 ಶೋಪಿಯಾನ ಜಿಲ್ಲೆಯ ಕುಂದಲನ್ ಎಂಬ ಪ್ರದೇಶದ ಒಂದು ಮನೆಯಲ್ಲಿ ಐದಾರು ಉಗ್ರರು ಅಡಗಿ ಕುಳಿತಿದ್ದು, ಉಗ್ರರ ವಿರುದ್ಧ ಸೇನೆಯು ಕಾರ್ಯಾಚರಣೆಯನ್ನು ಕೈಗೊಂಡಿದೆ.
ಈಗಾಗಲೇ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದು, ಆ ಪ್ರದೇಶದಲ್ಲಿನ ಸ್ಥಳೀಯರನ್ನು ಸ್ಥಳಾಂತರಿಸಿ  ಕಾರ್ಯಾಚರಣೆಯನ್ನು ಮುಂದುವರೆಸಿದೆ.


                                                         YOU MAY ALSO LIKE

No comments:

Post a Comment