Breaking News

ಹಿಂದುತ್ವವೇ ಪ್ರಾಣವೆನ್ನುವ ಯೋಗಿ ಆದಿತ್ಯನಾಥ್!! ಮುಸ್ಲಿಂ ಓಟ್ ಬ್ಯಾಂಕ್‍ಗಾಗಿ ಟೋಪಿ ತೊಡಲು ನಿರಾಕರಿಸಿದ ಯೋಗಿ ಆದಿತ್ಯನಾಥ !!

ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು 

ಹಿಂದೂ ರಾಷ್ಟ್ರೀಯವಾದಿ, ಪ್ರಕಾರ ವಾಘ್ಮಿ , ಹಿಂದೂ ಧರ್ಮದ ರಕ್ಷಣೆಗಾಗಿ ಸನ್ಯಾಸ ದೀಕ್ಷೆಯನ್ನು ಪಡೆದ ಮಹಾನ್ ಸಂತ ಯೋಗಿ ಆದಿತ್ಯನಾಥ. ಯಾವುದೇ ಬುದ್ದಿಜೀವಿಗಳ ಟೀಕೆಗೆ ಗುರಿಯಾಗುತ್ತದೆ ಎಂದು ಹೆದರದೆ ಪ್ರಕಾರ ಹಿಂದುತ್ವದ ಭಾಷಣಗಳನ್ನು ಮಾಡಿಕೊಂಡು ಬೆಳೆದು ಬಂದವರು. ಇತರ ಧರ್ಮವನ್ನು ಗೌರವಿಸುತ್ತಾ ರಾಜಕೀಯಕ್ಕಾಗಿ ತನ್ನ ಧರ್ಮವನ್ನು ಬಿಡದ ಮಹಾನ್ ಹಿಂದೂ ನಾಯಕರಲ್ಲಿ ಇವರೂ ಒಬ್ಬರು. ಇಂತಹ ಮಹಾನ್ ಹಿಂದೂ ವಾದಿ ತನ್ನ ಹಿಂದುತ್ವ ಹಾಗೂ ಅಭಿವೃದ್ಧಿಯ ತತ್ವವನ್ನು ಮುಂದಿಟ್ಟುಕೊಂಡು ಆಯ್ಕೆಯಾಗಿ, ಕಠಿಣ ಕಾನೂನುಗಳ ಮೂಲಕ ಉತ್ತರ ಪ್ರದೇಶವನ್ನು  ಅಭಿವ್ರದ್ಧಿಯ ಪಥದೆಡೆಗೆ ಕೊಂಡೊಯ್ಯುತ್ತಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ ಅವರು ಮಾಘರ್ ನಲ್ಲಿರುವ ಪ್ರಸಿದ್ಧ ಸಂತ ಕಭೀರರ ಕ್ಷೇತ್ರಕ್ಕೆ ಬೇಟಿ ನೀಡಿದ ಸಮಯದಲ್ಲಿ  ಮುಸ್ಲಿಮರು ಧರಿಸುವ ಉಣ್ಣೆಯ ಟೋಪಿಯನ್ನು ಧರಿಸಲು ನಿರಾಕರಿಸಿದ ವಿಡಿಯೋ ಬಹಳ ಸದ್ದು ಮಾಡುತ್ತಿದೆ. ನರೇಂದ್ರ ಮೋದಿ ಬೇಟಿ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ ಆದಿತ್ಯನಾಥ ಅವರಿಗೆ ಅಲ್ಲಿನ ಧರ್ಮಗುರುಗಳು ಟೋಪಿ ತೊಡಿಸಲು ಮುಂದಾದಾಗ ನಯವಾಗಿ ನಿರಾಕರಿಸಿದ್ದಾರೆ. ಈ ಮೂಲಕ ಒಟ್ ಬ್ಯಾಂಕ್ ಗಾಗಿ ತನ್ನ ಧರ್ಮವನ್ನು ಬಿಟ್ಟು, ಟೋಪಿ ಧರಿಸಿ ಪೋಟೋಗೆ ಪೋಸ್ ಕೊಡುವ ರಾಜಕಾರಣಿ ತಾನಲ್ಲ ಎಂದು ಸ್ಪ‌‌‍‌‍‌‌‍‌‌‍‌‌‍‌‌‍‌‌‍‌‌‍‌‌‍‌‌‍‌‌‍‌‌‍‌‌‍‌‌‍‌ಸ್ಟಪಡಿಸಿದ್ದಾರೆ.

ಯೋಗಿ ಆದಿತ್ಯನಾಥ


ಈ ಹಿಂದೆ ಟೋಪಿ ತೊಡಲು ನಿರಾಕರಿಸಿದ್ದ ನರೇಂದ್ರ ಮೋದಿಜಿ !!
ನರೇಂದ್ರ ಮೋದಿಯವರು ಮುಸ್ಲಿಮರ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಉಣ್ಣೆಯ ಟೋಪಿಯನ್ನು ತೊಡಿಸಲು ಬಂದಾಗ ನಯವಾಗಿಯೇ ನಿರಾಕರಿಸಿದ್ದರು. ಇದು ಅನೇಕ ಬುದ್ದಿಜೀವಿಗಳ ಕಣ್ಣಿಗೆ ಮತಾಂದತೆಯಂತೆ ಕಂಡಿತು..! ಅದಾದ ನಂತರ ರಜತ್ ಶರ್ಮಾ ರವರ 'ಆಪ್ ಕಿ ಅಧಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, " ಟೋಪಿ ಧರಿಸುವುದು ಏಕತೆಯ ಪ್ರತೀಕವಾದರೆ ನಾನು ಗಾಂದೀಜಿ , ಸರದಾರ್ ವಲ್ಲಭಾಯಿ ಪಟೇಲ್ ಹಾಗೂ ಪಂಡಿತ್ ನೆಹರೂರವರು ಧರಿಸಿರುವುದನ್ನು ಎಂದೂ ನೋಡಿಯೇ ಇಲ್ಲ. ಇದು ಭಾರತೀಯ ರಾಜಕೀಯದಲ್ಲಿ ಒಟ್ ಬ್ಯಾಂಕ್ ಗಾಗಿ ಏನಾದರೂ ಮಾಡುವ ವಿಕ್ರತಿ ಬೆಳೆದು ಬಂದಿದೆ. ನಾನು ಎಲ್ಲ ಧರ್ಮ ಹಾಗೂ ಪರಂಪರೆಯನ್ನು ಗೌರವುಸುತ್ತೇನೆ  ಅಂತೆಯೇ ನನ್ನ ಪರಂಪರೆಯನ್ನು ಅನುಸರಿಸಿಕೊಂಡು ಹೋಗುತ್ತಿದ್ದೇನೆ. ನನ್ನ ಪರಂಪರೆಯನ್ನು ನಂಬಿ ಜೀವಿಸುತ್ತಿರುವ ನಾನು ಇತರ ಧರ್ಮವನ್ನು ಗೌರವಿಸುತ್ತೇನೆ ಎಂದು ಹೇಳಲು ಟೋಪಿ ಧರಿಸುವ ಅಗತ್ಯವಿಲ್ಲ. ಟೋಪಿ ಧರಿಸಿಕೊಂಡು ಪೋಟೋ ತೆಗೆಸಿಕೊಳ್ಳುವ ಕೀಳು ಮಟ್ಟದ ರಾಜಕೀಯಕ್ಕೆ ನಾನು ಇಳಿಯುವುದಿಲ್ಲ" ಎಂದಿದ್ದರು.

Yogi_Adityanath


ರಾಹುಲ್ ಗಾಂದಿಯ ಜಾತ್ಯತೀತತೆ.. 
ಆದರೆ ಕಾಂಗ್ರೆಸಿನವರು ಸದಾ ಮುಸ್ಲಿಮರ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿರುತ್ತಾರೆ. ಅಂತೆಯೇ ರಂಜಾನ್ ಕೊನೆಯಲ್ಲಿ ಇಪ್ತಾರ್ ಕೂಟವನ್ನು ಏರ್ಪಡಿಸಿ ತಾವು ಜಾತ್ಯಾತೀತರು ಎಂದು ತೋರಿಸುವ ಬರದಲ್ಲಿ ಒಂದು ಎಡವಟ್ಟು ಮಾಡಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಮುಸ್ಲಿಮ್ ಬೆಂಬಲಿಗನೋರ್ವತೊಡಿಸಿದ ಟೋಪಿಯನ್ನು ಪೋಟೋ ತೆಗೆಸಿಕೊಂಡ ಕೇವಲ ಹತ್ತೇ ಸೆಕೆಂಡಿನಲ್ಲಿ ತೆಗೆದಿದ್ದರು. ಇಪ್ತಾರ್ ಕೂಟ ಏರ್ಪಡಿಸಿ ಗಿಮಿಕ್ ಮಾಡಲು ಹೋರಾಟ ರಾಹುಲ್ ಗಾಂದಿ ಮುಸ್ಲಿಮರಿಗೆ ಮುಜುಗರ ಉಂಟುಮಾಡಿ, ಅವರ ಕ್ರೋದಕ್ಕೆ ಗುರಿಯಾಗಿದ್ದರು. ಇಂತಹ ಓಲೈಕೆಯ ಗಿಮಿಕ್ ಗಳನ್ನು ಕೇವಲ ಕಾಂಗ್ರೆಸ್ ಮಾತ್ರ ಮಾಡಲು ಸಾದ್ಯವೇ ಹೊರತು ಬಿಜೆಪಿಯವರು ಮಾಡುವುದಿಲ್ಲ ಎಂಬುದು ಇ ಮೂಲಕ ಸಾಭಿತಾಗಿದೆ.

ಯೋಗಿ ಆದಿತ್ಯನಾಥ ರವರು ಮುಸ್ಲಿಮ್ ಟೋಪಿಯನ್ನು ಧರಿಸದೆ ಇರುವುದನ್ನು ಹಿಂದೂ ಸಮಾಜವು ಸ್ವಾಗತಿಸಿದ್ದು, ಅನ್ಯ ಧರ್ಮಿಯರ ಭಾವನೆಗೆ ದಕ್ಕೆ ತರದೆ, ಟೋಪಿಯನ್ನೂ ಧರಿಸದೆ, ಮುಸ್ಲಿಮ್ ತುಸ್ಟಿಕರಣ ಮಾಡದಿರುವ ಯೋಗಿಜಿಯ ನಡೆಯನ್ನು ಹೋಗಳಿದೆ. ಯೋಗಿ ಆದಿತ್ಯನಾಥರ ಕಣ ಕಣದಲ್ಲಿಯೂ ಹಿಂದುತ್ವದ ರಕ್ತ ಹರಿಯುತ್ತಿದ್ದು, ಯಾವುದೇ ಕಾರಣಕ್ಕೂ ಮುಸ್ಲಿಮರ ಟೋಪಿಯನ್ನು ಧರಿಸುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.ಇದರಿಂದಾಗಿ ತಿಳಿಯುತ್ತದೆ ಬಿಜೆಪಿಯವರು ಕೇವಲ ಒಟ್ ಗಾಗಿ ಕಾಂಗ್ರೆಸಿಗರಂತೆ ಹಿಂದುತ್ವವನ್ನು ಬಿಟ್ಟುಕೊಡುವವರಲ್ಲ ಎಂದು.
                                                       YOU MAY ALSO LIKE


No comments