ನರೇಂದ್ರ ಮೋದಿಯವರು ನನಗೆ ಶ್ರೀರಾಮ ಇದ್ದಂತೆ – ಪತ್ನಿ ಯಶೋದಾ ಬೆನ್ - News Desk

Thursday, June 21, 2018

ನರೇಂದ್ರ ಮೋದಿಯವರು ನನಗೆ ಶ್ರೀರಾಮ ಇದ್ದಂತೆ – ಪತ್ನಿ ಯಶೋದಾ ಬೆನ್

Jashodaben-Modi Image


ನಮ್ಮ ಪ್ರಧಾನಿಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯಾಗಿರಲಿ ಅದು ಹೆಚ್ಚಿನ ಪ್ರಚಾರವನ್ನು ಪಡೆದುಕೊಳ್ಳುತ್ತದೆ. ಅಂತೆಯೇ ಮಧ್ಯಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲರ ಹೇಳಿಕೆಯು ಪ್ರಚಾರವನ್ನು ಪಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವಿವಾಹಿತರು ಎಂದು ಅವರು ಹೇಳಿಕೆಯನ್ನು ನೀಡಿದ್ದರು. ಅವರ ಈ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋದಾ ಬೆನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಆನಂದಿಬೆನ್ ಈ ರೀತಿ ಹೇಳಿಕೆಯನ್ನು ನೀಡಿರುವುದು ನನಗೆ ಅಶ್ಚರ್ಯವನ್ನು ಉಂಟುಮಾಡಿದೆ. 2014 ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸ್ವತಃ ನರೇಂದ್ರ ಮೋದಿಯವರು, ತಾವು ವಿವಾಹಿತರು ಎಂದು ನನ್ನ ಹೆಸರು ನಮೂದಿಸಿದ್ದಾರೆ ಎಂದು ಹೇಳಿದ್ದನ್ನು ಜಶೋದಾ ಬೆನ್ ಸಹೋದರ ಅಶೋಕ್ ಮೋದಿ ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿರುವುದು ಸುದ್ದಿಯಾಗಿತ್ತು.
ಈ ವಿಚಾರ ಸಂಬಂಧಪಟ್ಟಂತೆ ವಿದ್ಯಾವಂತ ಮಹಿಳೆಯಾಗಿ ಆನಂದಿಬೆನ್ ಈ ರೀತಿ ಹೇಳಿಕೆ ನೀಡುವುದು ಸರಿಯಿಲ್ಲ. ನಾನು ಒಬ್ಬ ಶಿಕ್ಷಕಿಯಾಗಿ ಇದು ಸರಿ ಕಾಣುವುದಿಲ್ಲ. ಅವರು ಪ್ರಧಾನಿಯಾಗಿದ್ದು, ಈ ರೀತಿಯ ಹೇಳಿಕೆಗಳು ಅವರ ಗೌರವ ಪ್ರತಿಷ್ಠೆಗೆ ಧಕ್ಕೆ ತರುವಂತದ್ದಾಗಿದೆ. ಅವರು ನನಗೆ ಶ್ರೀರಾಮ ಇದ್ದಂತೆ ಎಂದು ಹೇಳಿದ್ದಾರೆ.

YOU MAY ALSO LIKE


No comments:

Post a Comment