ಪ್ರಣವ್ ಭೇಟಿ ಬಳಿಕ ಆರ್‌ಎಸ್‌ಎಸ್ ಸೇರುವವರ ಸಂಖ್ಯೆಯಲ್ಲಿ ಹೆಚ್ಚಳ - News Desk

Tuesday, June 26, 2018

ಪ್ರಣವ್ ಭೇಟಿ ಬಳಿಕ ಆರ್‌ಎಸ್‌ಎಸ್ ಸೇರುವವರ ಸಂಖ್ಯೆಯಲ್ಲಿ ಹೆಚ್ಚಳ

Pranav_Mukharji

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೊದಲಿನಿಂದಲೂ ದೇಶಕ್ಕೆ ಅಗತ್ಯ ನೆರವನ್ನು ನೀಡುತ್ತಾ ಬಂದಿದೆ. ಯಾವುದೇ ಪ್ರಕ್ರತಿ ವಿಕೋಪದ ಸಮಯದಲ್ಲಿಯೇ ಆಗಲಿ ಜನರ ನೆರವಿಗೆ ದುಮುಕುವವರಲ್ಲಿ ಇವರೇ ಪ್ರಥಮರು. ಯುದ್ಧಗಳ ಸಮಯದಲ್ಲಿ ಸೇನೆಯ ಸಹಾಯಕ್ಕೆ ನಿಂತವರು. ರಾಷ್ಟ್ರೀಯತೆ, ಅಪಾರ ದೇಶಭಕ್ತಿಯನ್ನು ಹೊಂದಿದ ಒಂದು ಮಹಾನ್ ಸಂಘ ಈ ಆರ್ ಎಸ್ ಎಸ್. ಆದರೆ ಇಂದಿನ ಕೆಲವು ರಾಜಕೀಯ ಪಕ್ಷಗಳು ಅದೊಂದು ಹಿಂದೂ ಪರ ಮತ್ತು ಹಿಂದೂ ಭಯೋತ್ಪಾದಕ ಸಂಘವೆಂದು ಬಿಂಬಿಸಲು ಪ್ರಯತ್ನಗಳು ನಡೆದಿವೆ.

ಹೆಸರಾಂತ ನಾಯಕ, ಕಾಂಗ್ರೆಸ್ ಧುರಿಣ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಆರ್ ಎಸ್ ಎಸ್ ನ ಕೇಂದ್ರ ಕಚೇರಿ ನಾಗಪುರದಲ್ಲಿ ಜೂನ್ ೭ ರಂದು ಆಗಮಿಸಿ ಭಾಷಣ ಮಾಡುತ್ತಾರೆ ಎಂದೊಡನೆ ಎಲ್ಲೆಡೆ ವ್ಯಾಪಕ ಚರ್ಚೆಯುಂಟಾಯಿತು. ಅನೇಕರ  ನಡುವೆಯೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಬಳಿಕ ಸಂಘದ ವರ್ಚಸ್ಸು ಮತ್ತಷ್ಟು ಹೆಚ್ಚಿದೆ. ಅಲ್ಲದೆ ಆರ್ ಎಸ್ ಎಸ್ ಸೇರಲು ಬಯಸುವವರ ಸಂಖ್ಯೆಯೂ ಹೆಚ್ಚಾಗಿದೆ.

ಆರ್ ಎಸ್ ಎಸ್ ನ ಹಿರಿಯ ಮುಖಂಡ ಬಿಪ್ಲಾವ್ ರಾಯ್ ಮಾತನಾಡಿ, ಜೂನ್ 1 ರಿಂದ 6 ರ ವರೆಗೆ ನಮ್ಮ ರಾಷ್ಟ್ರೀಯ ಮಟ್ಟದ ವೆಬ್ ಸೈಟ್ "ಜಾಯಿನ್ ಆರ್ ಎಸ್ ಎಸ್ ಗೆ " ನಿತ್ಯ ಸರಾಸರಿ 378 ಅರ್ಜಿಗಳು ಬಂದಿದ್ದವು. ಪ್ರಣವ್ ಮುಖರ್ಜಿ ಭಾಷಣ ಮಾಡಿದ ನಂತರ ಜೂನ್ 7 ರಂದು 1779 ಮನವಿಗಳು ಬಂದವು. ನಂತರ ನಿತ್ಯ ನಮಗೆ 1200 ರಿಂದ 1300 ಅರ್ಜಿಗಳು ಬರುತ್ತಿವೆ. ಇದರಲ್ಲಿ ಪಶ್ಚಿಮ ಬಂಗಾಳದಿಂದಲೇ ಅತಿ ಹೆಚ್ಚು ಮನವಿಗಳು ಬಂದಿವೆ ಎಂದು ತಿಳಿಸಿದರು.

RSS


ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸದ ಕಾರಣದಿಂದಾಗಿಯೇ ಆರ್ ಎಸ್ ಎಸ್ ಜನಪ್ರೀಯತೆ ಹೆಚ್ಚಳವಾಯಿತೇ ಎಂಬ ಪ್ರಶೆಗೆ, ಮುಖರ್ಜಿ ಅವರ ಕಾರಣದಿಂದಾಗಿಯೇ ಈ ರೀತಿ ಹೆಚ್ಚಳವಾಗಿದೆ ಎನ್ನುವುದು ತಪ್ಪಾಗುತ್ತದೆ. ಆರ್ ಎಸ್ ಎಸ್ ನ್ನು ಒಪ್ಪಿಕೊಳ್ಳುವವರ ಸಂಖ್ಯೆ ಹೆಚ್ಚಳವಾಗಿದೆ. ಸಮಾಜದಲ್ಲಿನ ಉತ್ತಮ ಚಟುವಟಿಕೆಯಿಂದಾಗಿ ಆರ್ ಎಸ್ ಎಸ್  ಜನರ ನಡುವೆ ಜನಪ್ರಿಯತೆ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

ಆದರೆ , ಪ್ರಣವ್ ಅವರ ಭಾಷಣದ ಬಳಿಕ ಜನರಲ್ಲಿ ಆರ್ ಎಸ್ ಎಸ್ ನ ಕಡೆಗೆ ಆಸಕ್ತಿ ಹೆಚ್ಚಾಗಿದೆ. ಅನೇಕ ರಾಜಕೀಯ ಪಕ್ಷಗಳು ಸಹಿಷ್ಣುತೆಯ ಕುರಿತು ಮಾತನಾಡುತ್ತವೆ. ಆದರೆ ನಮ್ಮ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಮುಖರ್ಜಿಯವರ ನಿರ್ಧಾರದ ಕುರಿತಂತೆ ಅವರೇ ಅಸಹಿಷ್ಣುತೆ ಹೊಂದಿದ್ದರು ಎಂದು ಹೇಳಿದರು. 



                                                       YOU MAY ALSO LIKE



No comments:

Post a Comment