Breaking News

ಇಂದಿನಿಂದ ರಷ್ಯಾದಲ್ಲಿ ರಂಗೇರಲಿರುವ ವಿಶ್ವಕಪ್ ಫುಟ್ಬಾಲ್ ಕ್ರೀಡಾಕೂಟ!

ಫುಟ್ಬಾಲ್ ಕ್ರೀಡೆಯು ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಕ್ರೀಡೆಯೆಂದೆನಿಸಿದ್ದು, ಇಂದಿನಿಂದ ರಷ್ಯಾದಲ್ಲಿ ಫುಟ್ಬಾಲ್ ವೈಭವವು ಪ್ರಾರಂಭವಾಗಲಿದೆ. 21ನೇ ಆವೃತ್ತಿಯ ವಿಶ್ವಕಪ್ ಪಂದ್ಯಾಟವು ಸುಮಾರು ಒಂದು ತಿಂಗಳುಗಳ ಕಾಲ ನಡೆಯಲಿದೆ. ಸದ್ಯ ಎಲ್ಲಾ ಫುಟ್ಬಾಲ್ ಪ್ರೇಮಿಗಳ ಚಿತ್ತವು ರಷ್ಯಾದತ್ತ ಹರಿದಿದ್ದು, ಭಾರತ ತಂಡವು ಈ ಕ್ರೀಡಾಕೂಟದಲ್ಲಿ ಇಲ್ಲದಿದ್ದರೂ ಕೂಡಾ ಭಾರತದಲ್ಲಿ ಫುಟ್ಬಾಲ್ ಅಭಿಮಾನಿಗಳಿಗೇನೂ ಕೊರತೆಯಿಲ್ಲ ಎನ್ನುವುದು ವಿಶೇಷವಾಗಿದೆ.

ಗುರುವಾರ ರಾತ್ರಿ ನಡೆಯುವ ಕೂಟದ ಉದ್ಘಾಟನಾ ಪಂದ್ಯದಲ್ಲಿ ರಶ್ಯ ಮತ್ತು ಸೌದಿ ಅರೇಬಿಯಾ ಮುಖಾಮುಖಿಯಾಗಲಿವೆ. ದಿನಗಳೆದಂತೆ ಕೂಟದ ನೆಚ್ಚಿನ ತಂಡಗಳಾದ ಬ್ರಝಿಲ್‌, ಜರ್ಮನಿ, ಆರ್ಜೆಂಟೀನಾ, ಸ್ಪೇನ್‌ಗಳ ನೈಜ ಸಾಮರ್ಥ್ಯ ಅನಾವರಣಗೊಳ್ಳಲಿದೆ. ಮೆಸ್ಸಿ, ನೇಮರ್‌, ರೊನಾಲ್ಡೊ, ಸ್ವಾರೆಸ್‌, ಪೋಗ್ಬಾ, ಹ್ಯಾರಿಕೇನ್‌ ಮೊದಲಾದ ಸ್ಟಾರ್‌ ಆಟಗಾರರು ಕ್ರೀಡಾಭಿಮಾನಿಗಳ ಪಾಲಿಗೆ ಸಾಕ್ಷಾತ್‌ ದೇವರಾಗಿಯೇ ಗೋಚರಿಸುತ್ತಾರೆ.
ಇದನ್ನೂ ಓದಿರಿ :- ದಾಂಡೇಲಿಯಲ್ಲಿ ಅರಣ್ಯ ವೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 
YOU MAY ALSO LIKE

No comments