ಬಿಸಿಯೂಟ ಸೇವಿಸಿ 60 ವಿದ್ಯಾರ್ಥಿಗಳು ಅಸ್ವಸ್ಥ - News Desk

Wednesday, June 20, 2018

ಬಿಸಿಯೂಟ ಸೇವಿಸಿ 60 ವಿದ್ಯಾರ್ಥಿಗಳು ಅಸ್ವಸ್ಥ

ಗಾಬರಿಗೊಂಡು ಆಸ್ಪತ್ರೆಯ ಎದುರು ಜಮಾಯಿಸಿದ  ಪಾಲಕರು
ಗಾಬರಿಗೊಂಡು ಆಸ್ಪತ್ರೆಯ ಎದುರು ಜಮಾಯಿಸಿದ  ಪಾಲಕರು 
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಲಕ್ಕ ನಾಯ್ಕನಕೊಪ್ಪ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ  ಸುಮಾರು 60 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.
ಸಂತ್ರಸ್ತ ಮಕ್ಕಳನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ತಿಳಿದು ಬಂದಿದೆ. ಗಾಬರಿಗೊಂಡ ಪಾಲಕರು ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದರು.‌
ಶಾಸಕ ಮಹಾದೇವಪ್ಪ ಯಾದವಾಡ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿದರು.  
YOU MAY ALSO LIKE


No comments:

Post a Comment